ಹೊಸದಿಗಂತ ಆನ್ಲೈನ್ ಡೆಸ್ಕ್:
ಮಹಿಳೆಯರಿಗೆ ಹೊಸ ಪಾಕಶಾಸ್ತ್ರ ಸ್ಕಾಲರ್ಶಿಪ್ ಘೋಷಿಸುವ ಉದ್ದೇಶದಿಂದ ಬರ್ಗರ್ ಕಿಂಗ್ ಮಾಡಿರುವ ಟ್ವೀಟ್ ಹೆಣ್ಣುಮಕ್ಕಳ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು, ಖ್ಯಾತ ಫಾಸ್ಟ್ಫುಡ್ ಕಂಪನಿ ಬರ್ಗರ್ ಕಿಂಗ್ ಎಡವಟ್ಟೊಂದನ್ನು ಮಾಡಿಕೊಂಡಿದೆ.
ಹೊಗಳಲು ಹೋಗಿ ಮಹಿಳೆಯರಿಂದ ಬೈಸಿಕೊಳ್ಳುವ ಪರಿಸ್ಥಿತಿಯನ್ನು ಬರ್ಗರ್ ಕಿಂಗ್ ತಂದುಕೊಂಡಿದೆ.
ಮಹಿಳೆಯರ ದಿನದಂದು ಸ್ಕಾಲರ್ಶಿಪ್ ಅನೌನ್ಸ್ ಮಾಡಿದ ಬರ್ಗರ್ಕಿಂಗ್ ‘Women belong in the kitchen’ ‘ಮಹಿಳೆಯರು ಅಡುಗೆ ಮನೆಗೆ ಸೀಮಿತ ‘ಎಂದು ಬರೆದಿದೆ.
ಬೇರೆ ಕಂಪನಿಗಳು ತಮ್ಮ ಜಾಹೀರಾತಿನಲ್ಲಿ, ನಿಮ್ಮ ಕ್ರಿಯೇಟಿವಿಟಿ ಬಳಕೆಯಾಗಬೇಕಾದ್ದು, ಮನೆಯಲ್ಲಲ್ಲ ನಮ್ಮ ಕಂಪನಿಯಲ್ಲಿ ಎಂದು ಬರೆಯುತ್ತಾರೋ ಅದೇ ರೀತಿ ಬರೆಯಲು ಹೋಗಿ ಬರ್ಗರ್ ಕಿಂಗ್ ಎಡವಟ್ಟು ಮಾಡಿಕೊಂಡಿದೆ.
How stupid can you be? Especially on International Women’s Day… #smh https://t.co/FvEeHQh9am pic.twitter.com/LgkrKo5NZC
— Alex Chin (@chinstachinsta) March 9, 2021