ನಟ ವಿಕ್ರಮ್ ಆರೋಗ್ಯದ ಕುರಿತು ‘ಕೋಬ್ರಾ’ ನಿರ್ದೇಶಕ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಸ್ಪತ್ರೆಗೆ ದಾಖಲಾಗಿದ್ದ ನಟ ವಿಕ್ರಮ್​ ಅವರು ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ನಟ ವಿಕ್ರಮ್​​ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.
ಶುಕ್ರವಾರ ಸಂಜೆ ವಿಕ್ರಮ್​ ನಟನೆಯ ಪೊನ್ನಿಯನ್​ ಸೆಲ್ವಂ ಭಾಗ1 ಚಿತ್ರದ ಟೀಸರ್​ ಬಿಡುಗಡೆ ಮಾಡಬೇಕಿತ್ತು. ಆದರೆ ವಿಕ್ರಮ್​ ಅನಾರೋಗ್ಯದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.ಆದರೆ ಅವರ ನಟನೆಯ ಮತ್ತೊಂದು ಚಿತ್ರ ಕೋಬ್ರಾ ಆಡಿಯೋ ಬಿಡುಗಡೆ ವೇಳೆ ವಿಕ್ರಮ್​ ಭಾಗಿಯಾಗಲಿದ್ದಾರೆ ಎಂದು ಈ ಚಿತ್ರದ ನಿರ್ದೇಶಕ ಅಜಯ್​ ಗಣಮುತ್ತು ಹೇಳಿದ್ದಾರೆ.
ವಿಕ್ರಮ್​ ಅವರು ಸಂಪೂರ್ಣ ಚೇತರಿಸಿಕೊಳ್ಳುತ್ತಿದ್ದು, ಅವರು ಇನ್ನು ಮೂರು ದಿನದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದಿರು ನಿರ್ದೇಶಕ ಅಜಯ್​​ ಕಾರ್ಯಕ್ರಮಕ್ಕೂ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ವಿಕ್ರಮ್​ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!