ರಾಜ್ಯದಲ್ಲಿ ‘ಕಲ್ಲಿದ್ದಲು ಕೊರತೆಯಿದೆ, ಲೋಡ್ ​ಶೆಡ್ಡಿಂಗ್ ಆಗುತ್ತೆ’ ಎಂದ ಕಾಂಗ್ರೆಸ್ ಗೆ ಸಚಿವ ಸುನೀಲ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಆಗಲ್ಲ, ಕಲ್ಲಿದ್ದಲು ಸರಬರಾಜು ಇಲ್ಲವಾಗಿದೆ ಎಂಬುದು ಕಪೋಲಕಲ್ಪಿತ ಸುದ್ದಿ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕಲ್ಲಿದ್ದಲು ಸರಬರಾಜು ಕೊರತೆ ಇದೆ ಅನ್ನುವ ಊಹಾಪೋಹದ ಮಾತು ಕಾಂಗ್ರೆಸ್ ಹೇಳ್ತಾ ಇದೆ. ಇದರಿಂದ ಲೋಡ್ ಶೆಡ್ಡಿಂಗ್ ಆಗುತ್ತೆ ಅಂತಾ ಸುಳ್ಳು ಸುದ್ದಿ ಹಬ್ಬಿಸ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಆಗಲ್ಲ ಎಂದು ಹೇಳಿದ್ದಾರೆ .

ರಾಜ್ಯದಲ್ಲಿ ಮಾರ್ಚ್ 21 ರಂದು 14,000 ಮೆಗಾವ್ಯಾಟ್ ಪೀಕ್ ಲೋಡ್ ಕಂಡು ಬಂತು. ಅಷ್ಟು ಬಂದ್ರೂ ಲೋಡ್ ಶೆಡ್ಡಿಂಗ್ ಮಾಡಲಿಲ್ಲ. 10,400 ಮೆಗಾವ್ಯಾಟ್ ಲೋಡ್ ಶೆಡ್ಡಿಂಗ್ ಬಂದಿದೆ. ನಮ್ಮ‌ಬೇಡಿಕೆಯೂ ಕಡಿಮೆಯಾಗ್ತಿದೆ. 12 ಸಾವಿರ ಮೆಗಾವ್ಯಾಟ್ ಗೆ ಇಳಿದಿದೆ. ರಾಯಚೂರು ಮತ್ತು ಬಳ್ಳಾರಿ ಉಷ್ಣ ವಿದ್ಯುತ್​ ಘಟಕಗಳನ್ನು ಬಂದ್ ಮಾಡಿಲ್ಲ. ಅದೆಲ್ಲವೂ ಸುಳ್ಳು ಸುದ್ದಿ ಹರಿದಾಡ್ತಿವೆ. ಎರಡ್ಮೂರು ಯೂನಿಟ್ ಬಂದ್ ಮಾಡಿದ್ದು ಕೊರತೆಯಿಂದಲ್ಲ. ಆರು ತಿಂಗಳ ಮೊದಲೇ ನಾವು ಎಚ್ಚರಿಕೆ ತೆಗೆದುಕೊಂಡಿದ್ವಿ, ಲೋಡ್ ಶೆಡ್ಡಿಂಗ್ ಕೊರತೆ ಇಲ್ಲಿಯವರೆಗೆ ಉದ್ಬವವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಯಚೂರು ಸೇರಿ ಒಂದಿಷ್ಟು ಕಡೆ ಮಳೆಯಿಂದಾಗಿ ಕಲ್ಲಿದ್ದಲು ಕೊರತೆ ಉಂಟಾಗಿದೆ. ಆರು ತಿಂಗಳ ಮೊದಲೇ ಎಚ್ಚರಿಕೆ ತೆಗೆದುಕೊಂಡಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಎಲ್ಲಾ ವ್ಯವಸ್ಥಿತವಾಗಿ ನೋಡಿಕೊಂಡು ಬಂದಿದ್ದೇವೆ. ಸೋಲಾರ್ ಮತ್ತು ವಿಂಡ್ ಹೆಚ್ಚು ಉತ್ಪಾದನೆ ಆಗ್ತಾ ಇದೆ. ಹಾಗಾಗಿ ಲೋಡ್ ಶೆಡ್ಡಿಂಗ್ ತೊಂದರೆ ಆಗಿಲ್ಲ. ಕಲ್ಲಿದ್ದಲು ಸರಬರಾಜು ಕೊರತೆಯಿಂದ ತೊಂದರೆ ಆಗಿರಬಹುದು. ಮುಂದೆ ಸರಿ ಮಾಡುವ ಕೆಲಸ ಮಾಡಿದ್ದೇವೆ. ಅನಗತ್ಯವಾಗಿ ಕಾಂಗ್ರೆಸ್ ನವರು ಈ ರೀತಿ ಮಾತಾಡುತ್ತಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಇಂತಹದ್ದು ಏನೂ ಆಗಲ್ಲ ಎಂದು ಸಚಿವ ಸುನಿಲ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!