ಹಿಂಡೆನ್ ಬರ್ಗ್‌ ವರದಿ ಕುರಿತು ಅದಾನಿ ಸಮೂಹ ಹೇಳಿದ್ದೇನು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕದ ಹಿಂಡೆನ್ ಬರ್ಗ್‌ ಸಂಶೋಧನಾ ಸಂಸ್ಥೆ ಪ್ರಕಟಿಸಿರೋ ವರದಿಯಿಂದಾಗಿ ಅಂಬಾನಿ ಸಮೂಹ ಲಕ್ಷಕೋಟಿ ರೂಪಾಯಿ ಲೆಕ್ಕದಲ್ಲಿ ನಷ್ಟವನ್ನು ಅನುಭವಿಸಿದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿಯ ಷೇರುಗಳು ನೆಲಕಚ್ಚಿವೆ. “ಅದಾನಿ ಗ್ರೂಪ್ ದಶಕಗಳ ಅವಧಿಯಲ್ಲಿ ಲಜ್ಜೆಗೆಟ್ಟ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ ತೊಡಗಿಸಿಕೊಂಡಿದೆ” ಎಂದು ಹಿಂಡೆನ್‌ ಬರ್ಗ್‌ ವರದಿಯು ಆರೋಪಿಸಿತ್ತು.
ಆದರೆ ಈ ಕುರಿತು ಈಗ ಅದಾನಿ ಸಮೂಹವು ಹಿಂಡೆನ್‌ಬರ್ಗ್‌ ವರದಿಯ ಕುರಿತು ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಈ ವರದಿಯು ಸಂಪೂರ್ಣ ಸುಳ್ಳಿನಿಂದಲೇ ತುಂಬಿದೆ ಎಂದಿದೆ.

ಸುಮಾರು 413 ಪುಟಗಳ ಸುಧೀರ್ಘ ಹೆಳಿಕೆಯನ್ನು ಅದಾನಿ ಸಮೂಹವು ನೀಡಿದ್ದು ಹಿಂಡೆನ್‌ಬರ್ಗ್‌ ವರದಿಯು ಸ್ವತಂತ್ರವೂ ಅಲ್ಲ, ಉತ್ತಮ ಸಂಶೋಧನಾ ವರದಿಯೂ ಅಲ್ಲ ಎಂದಿದೆ. ಹಿಂಡೆನ್‌ ಬರ್ಗ್‌ ವರದಿಯಲ್ಲಿ ವಜ್ರ ರಫ್ತಿಗೆ ಸಂಬಂಧಿಸಿದ ಕೆಲವು ಆರೋಪಗಳಿಗೆ ಸಂಬಂಧಿಸಿದಂತೆ ಅನೇಕ ಸುಳ್ಳು ನಿರೂಪಣೆಗಳನ್ನು ರಚಿಸಲಾಗಿದೆ. ಕಾನುನು ನಿಯಮಗಳನ್ನು ಪರಿಗಣಿಸದೇ ‘ಸಂಬಂಧಿತ ಪಕ್ಷಗಳು’ ಎಂದು ಉಲ್ಲೇಖಿಸಿ ಮಿಥ್ಯಾರೋಪಗಳನ್ನು ಹಿಂಡೆನ್‌ ಬರ್ಗ್‌ ವರದಿ ಮಾಡಿದೆ ಅದಾನಿ ಗ್ರೂಪ್ ಎಲ್ಲಾ ಅನ್ವಯವಾಗುವ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂದು ಅದಾನಿ ಸಮೂಹದ ಹೇಳಿಕೆ ತಿಳಿಸಿದ್ದು ಹಿಂಡೆನ್‌ ಬರ್ಗ್ ವರದಿಯು ಅದರ ಲಾಭವನ್ನು ಕಾಯ್ದಿರಿಸಲು ಮತ್ತು ಸೆಕ್ಯೂರಿಟಿಗಳಲ್ಲಿ ಸುಳ್ಳು ಮಾರುಕಟ್ಟೆ ಸೃಷ್ಟಿಸುವ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದೆ.

ಷೇರುಗಳ ವಿರುದ್ಧ ಹಣಕಾಸನ್ನು ʼಶಾರ್ಟ್‌ ಸೆಲ್ಲಿಂಗ್‌ʼ ಮುಖಾಂತರ ಸಂಗ್ರಹಿಸುವುದು ಜಾಗತಿಕವಾಗಿ ಸಾಮಾನ್ಯ ಅಭ್ಯಾಸವಾಗಿದೆ ಎಂದು ಅದಾನಿ ಸಮೂಹದ ಹೇಳಿಕೆ ತಿಳಿಸಿದೆ.”ಇದು ಕೇವಲ ಒಂದು ನಿರ್ದಿಷ್ಟ ಕಂಪನಿಯ ಮೇಲಿನ ದಾಳಿಯಲ್ಲ, ಆದರೆ ಭಾರತದ ಮೇಲಿನ ಲೆಕ್ಕಾಚಾರದ ದಾಳಿ, ಭಾರತೀಯ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ ಮತ್ತು ಗುಣಮಟ್ಟ ಮತ್ತು ಭಾರತದ ಬೆಳವಣಿಗೆಯ ಕಥೆ ಮತ್ತು ಮಹತ್ವಾಕಾಂಕ್ಷೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ” ಎಂದು ಅದಾನಿ ಸಮೂಹ ಆರೋಪಿಸಿದೆ.

ಹಿಂಡೆನ್‌ಬರ್ಗ್ ಎತ್ತಿದ 88 ಪ್ರಶ್ನೆಗಳಲ್ಲಿ 65 ಪ್ರಶ್ನೆಗಳು ಅದಾನಿ ಪೋರ್ಟ್‌ಫೋಲಿಯೊ ಕಂಪನಿಗಳು ಬಹಿರಂಗಪಡಿಸಿದ ವಿಷಯಗಳಿಗೆ ಸಂಬಂಧಿಸಿವೆ ಎಂದು ಅದಾನಿ ಗ್ರೂಪ್ ಹೇಳಿದೆ. ಉಳಿದಿರುವ 23 ಪ್ರಶ್ನೆಗಳಲ್ಲಿ, 18 ಸಾರ್ವಜನಿಕ ಷೇರುದಾರರು ಮತ್ತು ಮೂರನೇ ವ್ಯಕ್ತಿಗಳಿಗೆ ಸಂಬಂಧಿಸಿವೆ (ಅದಾನಿ ಪೋರ್ಟ್ಫೋಲಿಯೊ ಕಂಪನಿಗಳಿಗೆ ಸಂಬಂಧಿಸಿಲ್ಲ), ಆದರೆ ಉಳಿದ 5 ಪ್ರಶ್ನೆಗಳು ಕಾಲ್ಪನಿಕ ಸತ್ಯದ ಆಧಾರದ ಮೇಲೆ ರಚಿತವಾಗಿರುವ ಆಧಾರರಹಿತ ಆರೋಪಗಳಾಗಿವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!