Sunday, August 14, 2022

Latest Posts

ಕೆಆರ್​ಎಸ್​ ಡ್ಯಾಂ ವಿಚಾರ ಗೃಹ ಸಚಿವ ಬೊಮ್ಮಾಯಿ ಹೇಳಿದ್ದೇನು?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಡ್ಯಾಂ ಸುರಕ್ಷತೆ ವಿಚಾರವಾಗಿ ಶುರುವಾದ ವಿವಾದ ಇದೀಗ ವೈಯಕ್ತಿಕ ಹೇಳಿಕೆಯತ್ತ ವಾಲಿದ್ದು, ಇಂದು ಬೆಂಗಳೂರಿನಲ್ಲಿ ಕೆಆರ್​ಎಸ್​ ಡ್ಯಾಂ ವಿಚಾರವಾಗಿ ಸಂಸದೆ ಸುಮಲತಾ ಹಾಗೂ ಹೆಚ್​ಡಿಕೆ ನಡುವಿನ ಸಂಘರ್ಷದ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ ನಮ್ಮ ಡ್ಯಾಂ ಸುರಕ್ಷಿತವಾಗಿದೆಯಾ ಅನ್ನೋದಷ್ಟೇ ಮುಖ್ಯ ಎಂದು ಹೇಳಿದರು.
ಸಂಸದೆ ಸುಮಲತಾ ಅಂಬರೀಶ್​ ಹಾಗೂ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ವೈಯಕ್ತಿಕ ಹೇಳಿಕೆಗಳ ವಿಚಾರವಾಗಿ ನಾನು ಏನನ್ನೂ ಹೇಳಲಾರೆ. ನಮಗೆ ಡ್ಯಾಂ ಸುರಕ್ಷಿತವಾಗಿರೋದಷ್ಟೇ ಮುಖ್ಯ. ಇದಕ್ಕೆ ಟೆಕ್ನಿಕಲ್ ಟೀಂ ವರದಿ ನೀಡಬೇಕು. ಈ ಹಿಂದೆ ಕೆಆರ್​ಎಸ್​ ಡ್ಯಾಂನ್ನು ಪರೀಕ್ಷೆ ಮಾಡಲಾಗಿತ್ತು. ಆಗ ಡ್ಯಾಂನಲ್ಲಿ 70 ವರ್ಷ ಹಳೆಯದಾದ ಗೇಟ್​ ಇದ್ದಿದ್ದರಿಂದ ನೀರು ಪೋಲಾಗುತ್ತಿತ್ತು. ಬಳಿಕ 2011ರಲ್ಲಿ ನಾವು ಹೊಸ ಗೇಟ್​ನ್ನು ಹಾಕಿಸಿದ್ದೇವು. ಗೇಟ್​ ಸರಿ ಮಾಡಿಸಿದ್ರೆ ಡ್ಯಾಂ ಸುರಕ್ಷಿತವಾಗಿ ಇರುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss