Sunday, March 7, 2021

Latest Posts

ಈ ಒಂಬತ್ತು ವರ್ಷದ ಬಾಲಕ ರೆಕಾರ್ಡ್ ಬುಕ್ ಸೇರಲು ಮಾಡಿದ್ದೇನು ಗೊತ್ತಾ? ನಂಬೋಕ್ಕಾಗದಿದ್ರೂ ಇದು ಸತ್ಯ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಒಂದು ಗಂಟೆ ಸಮಯ ಕೊಟ್ಟರೆ ನೀವು ಏನೇನು ಅಡುಗೆ ಮಾಡಬಲ್ಲಿರಿ? ಎಷ್ಟೇ ವರ್ಷದಿಂದ ಅಡುಗೆ ಮಾಡುತ್ತಿದ್ದರೂ ಹೆಚ್ಚೆಂದರೆ ಒಂದು ಗಂಟೆಯಲ್ಲಿ ಐದು ಬಗೆಯ ಖಾದ್ಯ ತಯಾರಿಸಬಹುದು.
ಆದರೆ ಇಲ್ಲೊಬ್ಬ ಬಾಲಕ ಒಂದು ಗಂಟೆಯಲ್ಲಿ 172 ಖಾದ್ಯ ತಯಾರಿಸಿದ್ದಾನೆ.
ನಂಬಲಾಸಧ್ಯ ಎನಿಸಿದರೂ ಇದು ಸತ್ಯ. ಕೇರಳದ ಒಂಬತ್ತು ವರ್ಷದ ಬಾಲಕ ಹಯನ್ ಅಬ್ದುಲ್ಲಾ ಒಂದೇ ಗಂಟೆಯಲ್ಲಿ 172 ವಿಧದ ಭಕ್ಷ್ಯ ತಯಾರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾನೆ.
ನಾಲ್ಕು ವರ್ಷ ವಯಸ್ಸಿನಿಂದಲೇ ಅಡುಗೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಬಾಲಕ ಇದೀಗ ರೆಕಾರ್ಡ್ಸ್ ಬುಕ್‌ನಲ್ಲಿ ಹೆಸರು ಮಾಡಿದ್ದಾನೆ. ಒಂದು ಗಂಟೆಯಲ್ಲಿ ಬಿರಿಯಾನಿ,ಜ್ಯೂಸ್,ಮಿಲ್ಕ್‌ಶೇಕ್, ಪ್ಯಾನ್‌ಕೇಕ್ ಎಲ್ಲವನ್ನೂ ಈತ ಮಾಡಬಲ್ಲ. ಈತನ ತಂದೆ ತಾಯಿ ರೆಸ್ಟೋರೆಂಟ್ ಇದ್ದು, ಹಯನ್ ತಂದೆ ತಾಯಿಗೆ ಸಹಾಯ ಮಾಡುತ್ತಿದ್ದ. ರೆಕಾರ್ಡ್ ಮಾಡಲು ಈತ ಯಾವುದೇ ತಯಾರಿ ಕೂಡ ಮಾಡಿಲ್ಲ ಎಂದು ಸ್ವತಃ ಹಯನ್ ಹೇಳಿದ್ದಾನೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss