Thursday, August 11, 2022

Latest Posts

ಮಕ್ಕಳಾಗದ ಕೊರಗಿನಲ್ಲಿ ಮಹಿಳೆ ತನ್ನ ಭಾವನ ಮುದ್ದಾದ ಮಗುವಿಗೆ ಮಾಡಿದ್ದೇನು ಗೊತ್ತಾ?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮಕ್ಕಳಿಗಾಗಿ ತಾಯಂದಿರುವ ಹರಕೆ, ಪೂಜೆ ಮಾಡೋದನ್ನು ಕೇಳಿರುತ್ತೇವೆ. ಆದರೆ ತನಗೆ ಮಕ್ಕಳಾಗಲಿಲ್ಲ ಎಂದು ತನ್ನ ಭಾವನ ಮಗುವನ್ನು ಕೊಲ್ಲಲು ಮಹಿಳೆಯೊಬ್ಬಳು ಯತ್ನಿಸಿದ್ದಾಳೆ.
ಹೈದರಾಬಾದ್‌ನ ಈಶಾಮುದ್ದಿನ್ ಹಾಗೂ ಶುಜಾದ್ದೀನ್ ಅಣ್ಣತಮ್ಮಂದಿರು. ಇವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಅಣ್ಣನಿಗೆ ಮದುವೆಯಾಗಿ ಮೂರು ವರ್ಷದ ಮಗುವಿತ್ತು. ತಮ್ಮನಿಗೆ ಒಂದು ವರ್ಷದ ಹಿಂದೆ ಐಶಾ ಎನ್ನುವ ಯುವತಿಯೊಡನೆ ವಿವಾಹವಾಗಿತ್ತು. ಮದುವೆಯಾಗಿ ಒಂದು ವರ್ಷವಾದರೂ ಗರ್ಭಿಣಿಯಾಗಿಲ್ಲ ಎಂದು ಐಶಾ ಕೊರಗುತ್ತಿದ್ದಳು. ಅಣ್ಣನ ಮಗುವನ್ನು ಗಂಡ ಅತೀ ಪ್ರೀತಿಯಿಂದ ಕಾಣುತ್ತಿದ್ದುದನ್ನು ಐಶಾ ಸಹಿಸಲಿಲ್ಲ. ತನಗೆ ಮಕ್ಕಳಾಗದ ನೋವಿನಲ್ಲಿ ಮಗುವಿನ ಕೈ ಕಾಲು ಕಟ್ಟಿ ಎರಡನೇ ಅಂತಸ್ತಿನಿಂದ ಮಗುವನ್ನು ಎಸೆದಿದ್ದಾಳೆ. ಇದರಿಂದ ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss