ಹೊಸ ಹೊಸ ವಿನ್ಯಾಸದ ಮೊಬೈಲ್ ಗಳನ್ನು ಖರೀದಿಸುವ ಬರದಲ್ಲಿ ನಾವು ನಮ್ಮ ಹಳೆ ಮೊಬೈಲ್ ಗಳನ್ನು ಏನು ಮಾಡದೇ ವೇಸ್ಟ್ ಆಗಿ ಬಿಟ್ಟಿರುತ್ತೀರಿ.. ಇನ್ನು ಮುಂದೆ ಮನೆಯಲ್ಲಿರುವ ಮತ್ತೊಂದು ಮೊಬೈಲ್ ನಿಂದ ನೀವು ಏನೆಲ್ಲಾ ಮಾಡಬಹುದು ನೋಡಿ..
ಸೆಕ್ರುರಿಟಿ ಕ್ಯಾಮರಾ:
ನಿಮ್ಮ ಹಳೆಯ ಮೊಬೈಲ್, ಟ್ಯಾಬ್ಲೆಟ್ ಗಳನ್ನು ನಿಮ್ಮ ಮನೆಯ ಸಿಸಿ ಕ್ಯಾಮೆರಾಗೆ ಕನೆಕ್ಟ್ ಮಾಡಿಬಿಡಿ. ಇದರಿಂದ ನಿಮ್ಮ ಸೆಕ್ಯೂರಿಟಿ ಆಪ್ ಬಗ್ಗೆ ಯಾರೂ ತಿಳಿಯದೇ ಸೇಫ್ ಆಗಿ ಇರುತ್ತದೆ.
ಓದೋಕೆ ಬಳಸಿ:
ಮಕ್ಕಳಿಗೆ ಅಗತ್ಯವಿರುವ ಪಠ್ಯಗಳನ್ನು ಅದರಲ್ಲಿ ಡೌನ್ ಲೋಡ್ ಮಾಡಿ ಕೊಡಿ. ಇದರಿಂದ ಅವರು ಯಾವುದೇ ಬೇರೆ ಅಪ್ಲಿಕೇಷನ್ ಗಳ ತೊಂದರೆ ಇಲ್ಲದೆ ಓದುತ್ತಾರೆ.
ಕೊಟ್ಟು ಬಿಡಿ:
ಎಷ್ಟೋ ಸಲ ಮೊಬೈಲ್ ಗಳು ಮತ್ತು ವಿದ್ಯುತ್ ಉಪಕರಣಗಳನ್ನು ಗುಡ್ಡೆ ಹಾಕಿರುತ್ತೇವೆ. ಬದಲಿಗೆ ಅದನ್ನು ಯಾರಿಗಾದರೂ ಕೊಟ್ಟು ಬಿಡಿ.
ಗ್ರಂಥಾಲಯ:
ಪುಸ್ತಕ, ಹಾಡುಗಳ ಗ್ರಂಥಾಲಯವನ್ನಾಗಿ ನಿಮ್ಮ ಹಳೇ ಫೋನ್ ನನ್ನು ಬದಲಿಕೊಳ್ಳಿ. ಇದರಿಂದ ನೀವು ಪಾರ್ಟಿಗಳಿಗೆ ಇದನ್ನು ಬಳಸಬಹುದು.
ಗೇಮಿಂಗ್ ಸಿಸ್ಟಮ್:
ನಿಮ್ಮ ಮೊಬೈಲ್ ನಲ್ಲಿ ಲೇಟೆಸ್ಟ್ ಗೇಮ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಅದನ್ನು ಸೂಪರ್ ಗೇಮಿಂಗ್ ಸಿಸ್ಟಮ್ ಆಗಿ ಪರಿವರ್ತಿಸಬಹುದು.
ಮಾರಾಟ ಮಾಡಿ:
ತುಂಬಾ ದಿನ ಇಟ್ಟು ಮೊಬೈಲ್ ಹಾಳಾಗಿದ್ಯಾ ಹಾಕಿದ್ದರೆ ಚಿಂತೆ ಬಿಟ್ಟು ಯಾರಿಗಾದರೂ ಮಾರಾಟ ಮಾಡಿಬಿಡಿ.