CINE | ಕಂಗನಾಗೆ ಇದೇನಾಯ್ತು? ಮುಂಬೈ ಬಂಗಲೆ ಮಾರಿಕೊಂಡ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಕಂಗನಾ ರಣಾವತ್‌ ತಮ್ಮ ಎಮರ್ಜೆನ್ಸಿ ಸಿನಿಮಾ ರಿಲೀಸ್‌ಗಾಗಿ ಹೋರಾಡ್ತಿದ್ದಾರೆ. ಇದರ ಜೊತೆಗೆ ಹೊಸ ಬೆಳವಣಿಗೆ ಎನ್ನುವಂತೆ  ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಬಂಗಲೆಯನ್ನು 32 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಕಂಗನಾ ಅವರು ಬಾಂದ್ರಾದ ಪಾಲಿ ಹಿಲ್ ಭಾಗದಲ್ಲಿ 32 ಕೋಟಿ ರೂಪಾಯಿ ಮನೆ ಹೊಂದಿದ್ದರು. ಈ ವ್ಯವಹಾರ ಸೆಪ್ಟೆಂಬರ್ 5ರಂದು ಫೈನಲ್ ಆಗಿದೆ. ಇದನ್ನು ಕಂಗನಾ ಅವರು 2017ರಲ್ಲಿ 20 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದರು. ಈ ಕಟ್ಟಡ ಸುಮಾರು 3,075 ಚದರ ಅಡಿ ಇದೆ. 565 ಚದರ ಅಡಿ ಪಾರ್ಕಿಂಗ್ ಜಾಗ ಹೊಂದಿದೆ.

ಶ್ವೇತಾ ಭತಿಜಾ ಎಂಬುವವರು ಈ ಕಟ್ಟಡವನ್ನು ಖರೀದಿ ಮಾಡಿದ್ದಾರೆ. ತಮಿಳು ನಾಡು ಮೂಲದ ಇವರು 1.92 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಹಾಗೂ 30 ಸಾವಿರ ನೋಂದಣಿ ಶುಲ್ಕ ಪಾವತಿ ಮಾಡಿದ್ದಾರೆ. ಈ ಬಗ್ಗೆ ಕಂಗನಾ ಅವರು ಇನ್ನಷ್ಟೇ ಸಾರ್ವಜನಿಕವಾಗಿ ಹೇಳಿಕೊಳ್ಳಬೇಕಿದೆ.

ಕಂಗನಾ ಅವರ ಈ ಕಟ್ಟಡ ಮೊದಲಿನಿಂದಲೂ ಚರ್ಚೆಯಲ್ಲಿ ಇತ್ತು. ಬೃಹತ್ ಮುನ್ಸಿಪಲ್ ಕಾರ್ಪೋರೇಷನ್ ಅವರು 2020ರಲ್ಲಿ ಈ ಕಟ್ಟಡದ ಒಂದು ಭಾಗವನ್ನು ಒಡೆದು ಹಾಕಿದ್ದರು. ಅಕ್ರಮವಾಗಿ ಕಟ್ಟಡ ನಿರ್ಮಾಣ ಆಗಿದೆ ಎನ್ನುವ ಆರೋಪದಲ್ಲಿ ಈ ಕಟ್ಟಡದ ಒಂದು ಭಾಗ ನಾಶ ಆಗಿತ್ತು. ಇದರ ಹಿಂದೆ ರಾಜಕೀಯ ಪ್ರೇರಣೆ ಇದೆ ಎಂದು ಕಂಗನಾ ಆರೋಪಿಸಿದ್ದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!