ಆರೆಂಜ್ ಜ್ಯೂಸ್ ನಂತರ ಹಾಲು ಕುಡಿಯುವುದು, ಹಾಲಿಗೆ ಬಾಳೆಹಣ್ಣು ಹಾಕಿ ತಿನ್ನುವುದು, ಓಟ್ಸ್ ಜೊತೆಗೆ ಹಣ್ಣು ಮಿಕ್ಸ್ ಮಾಡುವುದು,ಚೀಸ್ ಪಿಜ್ಜಾ ಜೊತೆ ಕೋಕ್ ಕುಡಿಯುವುದು
ಇದನ್ನೆಲ್ಲಾ ಅದೆಷ್ಟು ಬಾರಿ ಮಾಡಿದ್ದೀರೋ ಅಲ್ವಾ? ಇವೆಲ್ಲ ವಿರುದ್ಧ ಆಹಾರಗಳು. ಇವನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?
ಈ ರೀತಿ ವಿರುದ್ಧಾಹಾರಗಳನ್ನು ಸೇವಿಸಿದರೆ ಹೊಟ್ಟೆ ನೋವು, ಹೊಟ್ಟೆ ಊತ, ಸುಸ್ತು, ತಲೆ ತಿರುಗುವುದು, ಗ್ಯಾಸ್ ಆಗುತ್ತದೆ. ಇದೇ ರೀತಿ ಮುಂದುವರಿದರೆ ಮುಂದೆ ದೀರ್ಘ ಕಾಲದ ಜೀರ್ಣಕ್ರಿಯೆ ಸಮಸ್ಯೆ, ರ್ಯಾಶಸ್ ಹಾಗೂ ಬಾಯಿಂದ ಕೆಟ್ಟ ವಾಸನೆ ಬರುತ್ತದೆ.