ಬೆಳಗ್ಗೆ ಎದ್ದ ತಕ್ಷಣ ಹಾಡುಗಳನ್ನು ಕೇಳುವ ಅಭ್ಯಾಸ ಇದೆಯಾ? ಹಾಡುಗಳಾಗದೇ ಇದ್ದರೂ ಯಾವುದಾದರೂ ಮ್ಯೂಸಿಕ್ ಕೇಳುತ್ತೀರಾ? ಆಫೀಸಿಗೆ ಹೋಗುವಾಗಲೂ ಕಾರ್ ಅಥವಾ ಬೈಕ್ನಲ್ಲಿಯೂ ಸಂಗೀತ ಇರಲೇಬೇಕಾ? ನೀವು ಸರಿಯಾಗಿಯೇ ಮಾಡುತ್ತಿದ್ದೀರಿ. ಬೆಳಗ್ಗೆಯೇ ಕಿವಿಗೆ ಸಂಗೀತ ಬಿದ್ದರೆ ತುಂಬಾ ರೀತಿಯಲ್ಲಿ ಜೀವನ ಇಂಪ್ರೂವ್ ಆಗುತ್ತದೆ ಹೇಗೆ ಅಂತೀರಾ ನೋಡಿ..
ನೀವು ಖುಷಿಯಾಗಿರುತ್ತೀರಿ
ಬೆಳಗ್ಗೆ ಎದ್ದ ತಕ್ಷಣದಿಂದಲೇ ಹಾಡುಗಳನ್ನು ಹಾಕಿಕೊಂಡು ಕೇಳಿದಾಗ ನೀವು ಖುಷಿಯಾಗಿ ಇರುತ್ತೀರಿ. ನಿಮ್ಮ ಮೂಡ್ ಚೆನ್ನಾಗಿರುತ್ತದೆ. ಇದರಿಂದ ಇಡೀ ದಿನ ಚೆನ್ನಾಗಿ ಹೋಗುತ್ತದೆ.
ಮೆದುಳಿನ ಕೆಲಸ ಈಸಿಯಾಗುತ್ತದೆ
ಬೆಳಗ್ಗೆ ಎದ್ದ ತಕ್ಷಣ ನಾರ್ಮಲ್ ಮೋಡ್ಗೆ ನೀವು ಬರಬೇಕಾದರೆ ಎಷ್ಟು ಸಮಯ ಬೇಕಾಗುತ್ತದೆ? ಅದೆ ಮ್ಯೂಸಿಕ್ ಜೊತೆಗೆ ಎದ್ದರೆ ನಿಮ್ಮ ಬ್ರೇನ್ ಅದಕ್ಕೆ ತಕ್ಕಂತೆ ಕೆಲಸ ಮಾಡಲು ಆರಂಭಿಸುತ್ತದೆ. ನಿಮ್ಮ ಬ್ರೇನ್ ಕೂಡ ಖುಷಿಯಾಗಿರುತ್ತದೆ. ಶಾರ್ಪ್ ಆಗುತ್ತೀರಿ.
ಕಾರ್ಟಿಸೋಲ್ ಲೆವೆಲ್ ಕಡಿಮೆ ಮಾಡುತ್ತದೆ
ಕಾರ್ಟಿಸೋಲ್ ಎಂದರೆ ನಿಮ್ಮ ದೇಹದಲ್ಲಿ ಇರುವ ಅಲಾರಂ ಹಾರ್ಮೋನ್ ಎಂದುಕೊಳ್ಳಿ. ಇದು ನೀವು ಸ್ಟ್ರೆಸ್ ಆದಾಗ ದೇಹದಲ್ಲಿ ರಿಲೀಸ್ ಆಗುತ್ತದೆ. ಇದರಿಂದ ಒಳ್ಳೆಯದೇನೂ ಆಗುವುದಿಲ್ಲ. ಆದಷ್ಟು ಸ್ಟ್ರೆಸ್ ಆಗಬೇಡಿ. ಸ್ಟ್ರೆಸ್ ಕಂಟ್ರೋಲ್ ಮಾಡಲು ಮ್ಯೂಸಿಕ್ ಸಹಾಯಕ ಎನ್ನಲಾಗಿದೆ.
ರೋಗ ನಿರೋಧಕ ಶಕ್ತಿಹೆಚ್ಚಳ
ಪ್ರತಿ ದಿನ ನಿಮ್ಮಿಷ್ಟದ ಯಾವುದಾದರೂ ಹಾಡುಗಳಿಗೆ ಒಂದು ಗಂಟೆ ಡ್ಯಾನ್ಸ್ ಮಾಡಿ. ಅಥವಾ ಹಾಡುಗಳನ್ನು ಕೇಳಿ. ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಅತಿ ಹೆಚ್ಚು ಆಂಟಿಬಾಡಿಗಳು ಪ್ರೊಡ್ಯೂಸ್ ಆಗುತ್ತದೆ. ಡ್ಯಾನ್ಸ್ ಮ್ಯೂಸಿಕ್ ಆಗಿರಬೇಕು ಎಂದೇನಿಲ್ಲ. ನಿಮ್ಮಿಷ್ಟದ ನಿಮಗೆ ಖುಷಿ ನೀಡುವ ಮ್ಯೂಸಿಕ್ ಆಗಿರಲಿ.
ಕ್ರಿಯೇಟಿವ್ ಆಗುತ್ತೀರಿ
ಮ್ಯೂಸಿಕ್ ಕೇಳುವವರು, ಮ್ಯೂಸಿಕ್ ಕೇಳದವರಿಗಿಂತ ಕ್ರಿಯೇಟಿವ್ ಆಗಿರುತ್ತಾರಂತೆ. ಪಾಸಿಟಿವ್ ಎನರ್ಜಿ ನಿಮ್ಮೊಳಗೆ ಹರಿದು ನೀವು ಕ್ರಿಯೇಟಿವ್ ಆಗಿರುತ್ತೀರಿ. ಕೆಲವರು ಕ್ರಿಯೇಟಿವ್ ಆದ ಕೆಲಸಗಳನ್ನು ಮಾಡುವಾಗ ಹಾಡುಗಳನ್ನು ಅಥವಾ ಮ್ಯೂಸಿಕ್ ಕೇಳಿಸಿಕೊಳ್ಳುತ್ತಲೇ ಇರುತ್ತಾರೆ.
ಮೂಡ್ ನಾರ್ಮಲ್ ಆಗುತ್ತದೆ
ನಿಮಗೆ ನಿನ್ನೆಯ ಬೇಜಾರು, ದುಃಖ ಹತಾಶೆ ಏನೇ ಇರಲಿ. ಹಾಡು ಕೇಳಿ. ಅದರಿಂದ ನಿಮಗೆ ಅಳು ಬಂದರೆ ಅತ್ತುಬಿಡಿ. ಆಗ ನಿಮ್ಮ ಮನಸ್ಸು ಹಗುರವಾಗುತ್ತದೆ. ನಂತರ ನೀವು ನೆಮ್ಮದಿಯಾಗಿ ಇರಬಹುದು.