ಒಂದೇ ವ್ಯಕ್ತಿಗೆ ಮತ್ತೆ ಮತ್ತೆ ಕೋವಿಡ್ ಬಂದರೆ ಏನಾಗುತ್ತದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಸೋಂಕು ಒಂದೇ ವ್ಯಕ್ತಿಗೆ ಮತ್ತೆ ಮತ್ತೆ ಬರುವುದರಿಂದ ಏನಾಗುತ್ತದೆ? ಕೋವಿಡ್ ಸೋಂಕು ಮರುಕಳಿಸುವುದರಿಂದ ಅಂಗಾಂಗ ವೈಫಲ್ಯ ಹಾಗೂ ಸಾವಿನ ಅಪಾಯ ಇದೆ ಎಂದು ವರದಿಯೊಂದು ಹೇಳಿದೆ. ಸೋಂಕು ಒಮ್ಮೆ ಬಂದು ಯಾವುದೇ ಅಪಾಯ ಆಗದೇ ಇದ್ದವರು, ಏನಾಗುವುದಿಲ್ಲ ಎನ್ನುವ ಮನೋಭಾವದಿಂದ ಹೊರಬಂದು, ಸೋಂಕು ಮರುಕಳಿಸದಂತೆ ಎಚ್ಚರವಹಿಸುವುದು ಸೂಕ್ತ ಎಂದು ವರದಿ ಹೇಳಿದೆ.

ನೇಚರ್ ಮೆಡಿಸಿನ್‌ನಲ್ಲಿ ಅಧ್ಯಯನ ಪ್ರಕಟವಾಗಿದ್ದು, ಸೋಂಕು ಮತ್ತೆ ಮತ್ತೆ ಬಂದರೆ ಶ್ವಾಸಕೋಶ, ಹೃದಯ, ಮೆದುಳು, ರಕ್ತ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಸಾವು ಸಂಭವಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕಿಡ್ನಿ ಸಮಸ್ಯೆ, ಮಧುಮೇಹ ಹಾಗೂ ಮಾನಸಿಕ ಸಮಸ್ಯೆಗಳು ಎದುರಾಗಲಿವೆ. ಈಗಾಗಲೇ ವ್ಯಾಕ್ಸಿನ್ ಪಡೆದಿದ್ದೇವೆ ನಮಗೇನೂ ಆಗದು ಎನ್ನುವ ಮನೋಭಾವ ಹೋಗಬೇಕಿದೆ ಎಂದು ಅಧ್ಯಯನ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!