ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾತ್ರಿ ನಿದ್ದೆ ಸರಿಯಾಗಿ ಮಾಡೋದಿಲ್ವಾ? ಇದರಿಂದ ಆರೋಗ್ಯಕ್ಕೆ ಏನೆಲ್ಲಾ ತೊಂದರೆಯಾಗುತ್ತೆ ನೋಡಿ

ರಾತ್ರಿ 10 ಗಂಟೆ ಆಗುತ್ತಿದಂತೆ ಮನೆ ಮಂದಿಯೆಲ್ಲಾ ಮಲಗುತ್ತಿದ್ದ ಕಾಲ ಈಗ ಇಲ್ಲ. ಈಗ ಬಹುತೇಕ ಮಂದಿ ಊಟ ಮಾಡೋದೆ 10ರ ನಂತರ.. ಇನ್ನು ಮಲಗೋದು ಕೇಳಬೇಕಾ? ಟಿವಿ, ಮೊಬೈಲ್, ಕೆಲಸ, ಮಾತುಕತೆ ಅಂದುಕೊಂಡು ಮಧ್ಯರಾತ್ರಿ 2 ಅಥವಾ 3 ಗಂಟೆಗೆ ಮಲಗುತ್ತಾರೆ. ಆದರೆ ತಡವಾಗಿ ಮಾಡೋ ನಿದ್ದೆ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

ರೋಗ ಕಾಡುತ್ತೆ:
ರಾತ್ರಿ ಹೊತ್ತು ನಿದ್ದೆ ಮಾಡದೇ ಇದ್ದರೆ ನೀವು ರೋಗಕ್ಕೆ ತುತ್ತಾಗುತ್ತೀರ. ಇದು ನಿಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ತಲೆ ನೋವು, ಕಣ್ಣು ಉರಿ ಸಮಸ್ಯೆಗಳು ಕಾಡುತ್ತದೆ.

ಹೃದಯ ಸಮಸ್ಯೆ:
ಪ್ರತಿದಿನ ರಾತ್ರಿ ಕನಿಷ್ಠ 5 ಗಂಟೆ ಗರಿಷ್ಟ 9 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಮಾಡಿದರೆ ನಿಮ್ಮ ಹೃದಯಕ್ಕೆ ತೊಂದರೆಯಾಗುತ್ತದೆ. ಇದು ಸ್ಟ್ರೋಕ್, ರಕ್ತ ನಾಳಗಳಲ್ಲಿ ತೊಂದರೆ ಕಾಣುತ್ತದೆ.

ಯೋಚನಾ ಶಕ್ತಿ:
ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡುವುದರಿಂದ ನಿಮ್ಮ ಯೋಚನಾ ಶಕ್ತಿ ಕಡಿಮೆಯಾಗುತ್ತದೆ. ಇದು ನಿಮ್ಮ ನಿರ್ಧರಿಸುವ ರೀತಿ, ಸಮಸ್ಯೆ ಬಗೆಹರಿಸುವ ಕ್ರಮಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.

ನೆನಪಿನ ಶಕ್ತಿ:

ರಾತ್ರಿ ಕಷ್ಟಪಟ್ಟು, ನಿದ್ದೆಗೆಟ್ಟು ಕೆಲಸ ಮಾಡುವುದರಿಂದ ನಿಮ್ಮ ದೇಹವು ಕಲಿಕೆ ಮತ್ತು ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆದಷ್ಟು ಸರಿಯಾದ ಸಮಯದಲ್ಲಿ ಮಲಗುವುದು ಉತ್ತಮ.

ತೂಕ ಹೆಚ್ಚಳ:
ದೇಹಕ್ಕೆ ಸರಿಯಾದ ವಿಶ್ರಾಂತಿ ಸಿಗದಿದ್ದಾಗ ಸೇವಿಸಿದ ಆಹಾರವೆಲ್ಲಾ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಇದರಿಂದ ನಿಮಗೆ ಬೊಜ್ಜಿನ ಸಮಸ್ಯೆ, ತೂಕ ಹೆಚ್ಚಳದ ಸಮಸ್ಯೆ ಕಾಡುತ್ತದೆ.

ಮಧುಮೇಹ:
ರಾತ್ರಿ ನಿದ್ದೆ ಮಾಡದಿರುವವರಿಗೆ ಹೆಚ್ಚು ಕಾಯಿಲೆಗಳು ಹಿಂಬಾಲಿಸುತ್ತದೆ. ಅದರಲ್ಲಿ ಈ ಮಧುಮೇಹವೂ ಒಂದು. ನಿದ್ದೆ ಕಡೆಗಣಿಸಿದರೆ ನೀವು ಮಧುಮೇಹಿಗಳಾಗುತ್ತೀರಿ.

ಅಪಘಾತ:
ಸರಿಯಾದ ನಿದ್ದೆ ಇಲ್ಲದಿದ್ದಾಗ ವಾಹನ ಚಾಲನೆ ಮಾಡುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತದೆ.

ತ್ವಚೆ:
ನೀವು ರಾತ್ರಿ ಹೊತ್ತು ನಿದ್ದೆ ಮಾಡದಿದ್ದರೆ ನಿಮ್ಮ ತ್ವಚೆಗೆ ಬೇಗ ಸುಕ್ಕುಗಳು ಕಾಣಿಸುತ್ತದೆ. ಇದರಿಂದ ನೀವು ಯೌವನದಲ್ಲೇ ಹಿರಿಯರಾಗಿ ಕಾಣುವಂತೆ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss