spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಮುಂದೆ ಅಡುಗೆಯಲ್ಲಿ ಹೆಚ್ಚು ಜಾಯಿಕಾಯಿ ಬಳಸಿ..! ಇದರಲ್ಲಿ ಸಾಕಷ್ಟು ಆರೋಗ್ಯಕರ ಲಾಭಗಳಿವೆ..

- Advertisement -Nitte

ಜಾಯಿಕಾಯಿ ಸಾಂಬಾರು ಪದಾರ್ಥಗಳಲ್ಲಿ ಒಂದು. ಹೇಗೇ ಈ ಜಾಯಿಕಾಯಿ ಅಡುಗೆ ರುಚಿ ಹೆಚ್ಚಿಸುತ್ತದೆಯೋ ಹಾಗೆಯೇ ಆರೋಗ್ಯದ ರುಚಿಯನ್ನೂ ಹೆಚ್ಚಿಸುತ್ತದೆ. ನಾಲಿಗೆ ಸ್ವಚ್ಛಗೊಳಿಸುವುದರಿಂದ ಹಿಡಿದು ನಿದ್ರಾಹೀನತೆ ನಿವಾರಣೆಯವರೆಗೂ ಜಾಯಿಕಾಯಿ ಉಪಯೋಗಕಾರಿ. ಇನ್ನು ಏನೆಲ್ಲಾ ಲಾಭವಿದೆ ನೋಡೋಣ….

ನಾಲಿಗೆ:
ನಾಲಿಗೆ ಒಮ್ಮೊಮ್ಮೆ ಬಿಳಿಯಾಗಿರುತ್ತದೆ. ಕೆಟ್ಟ ವಾಸನೆ ಬರುತ್ತಿರುತ್ತದೆ. ಆಗ ಜಾಯಿಕಾಯಿಯನ್ನು ತೇಯ್ದು ಅದನ್ನು ನಾಲಿಗೆಗೆ ಹಾಕಿಕೊಂಡು ತಿಕ್ಕಬೇಕು. ಆಗ ನಾಲಿಗೆ ಸ್ವಚ್ಛವಾಗುತ್ತದೆ.

ನಿದ್ರಾಹೀನತೆ:
ನಿದ್ರಾಹೀನತೆ ಸಮಸ್ಯೆ ಇರುವವರು ದಿನವೂ ರಾತ್ರಿ ಮಲಗುವ ಮುನ್ನ ಜಾಯಿಕಾಯಿಯನ್ನು ತೇಯ್ದು ಅದರ ಒಂದು ಚಮಚ ರಸವನ್ನು ಅರ್ಧ ಕಪ್ ಹಾಲಿಗೆ ಹಾಕಿಕೊಂಡು ಸೇವಿಸುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.

ಹಲ್ಲುನೋವು:
ಜಾಯಿಕಾಯಿಯನ್ನು ಪುಡಿಮಾಡಿಕೊಂಡು ಅದನ್ನು ಒಂದು ಕಪ್ ಉಪ್ಪು ನೀರಿಗೆ ಹಾಕಿಕೊಂಡು ಬಾಯಿ ಮುಕ್ಕಳಿಸಿದರೆ ಹಲ್ಲುನೋವು ನಿವಾರಣೆಯಾಗುತ್ತದೆ.

ಜೀರ್ಣಕ್ರಿಯೆ:
ಊಟದ ನಂತರ ಸಣ್ಣ ಚೂರು ಜಾಯಿಕಾಯಿ ಜಗಿದರೆ ಜೀರ್ಣಕ್ರಿಯೆ ಸರಿಯಾಗುತ್ತದೆ. ಹೊಟ್ಟೆ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತದೆ.

ಮೊಡವೆ:
ಮುಖದ ಮೇಲಿನ ಮೊಡವೆ ಹೋಗಲಾಡಿಸಲು ಜಾಯಿಕಾಯಿ ಬೆಸ್ಟ್ ಮದ್ದು. ಜಾಯಿಕಾಯಿಯನ್ನು ತೇಯ್ದು ಅದನ್ನು ಮೊಡವೆ ಇರುವ ಜಾಗದಲ್ಲಿ ಹಚ್ಚಬೇಕು. ಮೊಡವೆ ನಿವಾರಣೆಯಾಗುತ್ತದೆ.

ಗ್ಯಾಸ್ಟ್ರಿಕ್:
ಗ್ಯಾಸ್ಟ್ರಿಕ್ ಮತ್ತು ಅಜೀರ್ಣತೆ ಸಮಸ್ಯೆ ಇರುವವರು ಚಿಕ್ಕ ಜಾಯಿಕಾಯಿ ಚೂರನ್ನ್ನು ತಿನ್ನುವುದು ರೂಢಿಸಿಕೊಳ್ಳಿ. ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ರೋಗ ನಿರೋಧಕ ಶಕ್ತಿ:
ಪ್ರತಿ ದಿನ ಜಾಯಿಕಾಯಿಯನ್ನು ಸೇವಿಸುವುದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕೊರೋನಾ ಸಮಯದಲ್ಲಿ ಹೆಚ್ಚು ಜಾಯಿಕಾಯಿ ಸೇವಿಸುವುದು ಉತ್ತಮ

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss