spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೋಂ ಕ್ವಾರೆಂಟೀನ್‌ನಲ್ಲಿರುವ ಆಲಿಯಾ ಭಟ್ ಏನು ಹೇಳಿದ್ದಾರೆ ನೋಡಿ..

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಾಲಿವುಡ್‌ಗೂ ಕೊರೋನಾಗೂ ಗಾಢವಾದ ಸ್ನೇಹವಾಗಿದೆ. ಸಾಲು ಸಾಲಾಗಿ ಎಲ್ಲರೂ ಪಾಸಿಟಿವ್ ಎಂದು ಟ್ವೀಟ್ ಮಾಡುತ್ತಿದ್ದಾರೆ. ಅದೇ ಸಾಲಿಗೆ ಆಲಿಯಾ ಭಟ್ ಕೂಡ ಸೇರುತ್ತಾರೆ.
‘ಬೇರೆಯವರಿಗೆ ಪಾಸಿಟಿವ್ ಬಂದಾಗ ನಾನು ಇನ್ನಷ್ಟು ಜಾಗರೂಕಳಾಗಿರಬೇಕು ಎಂದುಕೊಳ್ಳುವಾಗಲೇ ತನಗೂ ಕೊರೋನಾ ವಕ್ಕರಿಸಿದೆ ‘ಎಂದಿದ್ದಾರೆ.
ಆಲಿಯಾ ಈ ಸಮಯದಲ್ಲಿ ರೂಮ್‌ನಲ್ಲಿ ಒಬ್ಬರೇ ಕುಳಿತುಕೊಂಡ ಫೋಟೊ ಒಂದನ್ನು ಶೇರ್ ಮಾಡಿದ್ದಾರೆ.
‘ಕೊರೋನಾ ಬಂದಿದೆ ಎಂದು ತಲೆ ಮೇಲೆ ಕೈ ಹೊತ್ತು ಕೂರುವುದಕ್ಕಿಂತ ಈ ಸಮಯದಲ್ಲಿ ನಮ್ಮ ಬಗ್ಗೆ ನಾವು ಆಲೋಚಿಸುವುದು ಒಳಿತು’ ಎಂದಿದ್ದಾರೆ. ‘ಮಾರ್ಗನ್ ಹಾರ್ಪರ್ ನಿಕೋಲ್ಸ್ ಹೇಳಿದ ಮಾತೊಂದು ನೆನಪಿಗೆ ಬಂತು, ನೀವು ಎಂದಿಗೂ ಯೋಚಿಸದ ವಿಷಯಗಳು ಮಾತ್ರ ನಿಮ್ಮನ್ನು ಎಂದೂ ಯೋಚಿಸದ ಸ್ಥಳಗಳಿಗೆ ಕೊಂಡೊಯ್ಯುತ್ತದೆ’ ಎಂದು ಬರೆದಿದ್ದಾರೆ. ಕೊರೋನಾ ಸಮಯದಲ್ಲಿ ತಾವು ಅನುಭವಿಸುತ್ತಿರುವ ಒಂಟಿತನದಿಂದ ಈ ಮಾತುಗಳನ್ನು ಆಲಿಯಾ ನೆನಪಿಸಿಕೊಂಡಿರಬಹುದು. ‘ಕೊರೋನಾ ಬಂದರೂ ಗಟ್ಟಿಯಾಗಿರಿ. ಇದೆಲ್ಲವೂ ಮುಗಿದಮೇಲೆ ಇನ್ನೂ ಶ್ರೇಷ್ಠ ಜಾಗಕ್ಕೆ ನೀವು ತಲುಪುತ್ತೀರಿ’ ಎಂದು ಮೋಟಿವೇಶನ್ ನೀಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss