ಜ್ಞಾನವಾಪಿ ಮಸೀದಿಯಲ್ಲಿ ಏನೆಲ್ಲಾ ಪತ್ತೆಯಾಗಿದೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಹುಚರ್ಚಿತ ಜ್ಞಾನವಾಪಿ ಸರ್ವೇ ಸಮಿತಿಯ ಸದಸ್ಯರಾಗಿದ್ದ ಅಜಯ್‌ ಮಿಶ್ರಾ ಈಗ ಸ್ಫೊಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ. ಮಾಧ್ಯಮಗಳಿಗೆ ಮಾಹಿತಿಸೋರಿಕೆ ಮಾಡಿರುವ ಆರೋಪದ ಮೇಲೆ ನ್ಯಾಯಾಲಯವು ಅವರನ್ನು ಸಮಿತಿಯಿಂದ ತೆಗೆದುಹಾಕಿತ್ತು. ನಂತರದಲ್ಲಿ ಅವರು ಹಿಂದೂ ಅರ್ಜಿದಾರರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದರು.

ಈ ಕುರಿತು ಇಂಡಿಯಾ ಟುಡೇ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ “ದೇವಾಲಯದ ಅವಶೇಷಗಳಂತೆ ಕಾಣುವ ಹಲವು ಕುರುಹುಗಳು ಪತ್ತೆಯಾಗಿವೆ. ಅಲ್ಲದೇ ಮಸೀದಿಯ ಗೋಡೆಗಳ ಮೇಲೆ ಶೇಷನಾಗ ಗುರುತುಗಳೂ ಇದ್ದವು. ನನಗೆ ನೆಲಮಾಳಿಗೆಗೆ ಹೋಗಲು ಅವಕಾಶ ನೀಡಲಿಲ್ಲ. ಆದರೆ ಪತ್ತೆಯಾದ ಕುರುಹುಗಳೆಲ್ಲವೂ ಸುಮಾರು 500-600 ವರ್ಷಗಳಷ್ಟು ಹಳೆಯದಾಗಿದ್ದವು” ಎಂದು ಅಜೆಯ್‌ ಮಿಶ್ರಾ ಹೇಳಿದ್ದಾರೆ.

“ಮಸೀದಿಯೊಳಗಡೆ ಸನಾತನ ಧರ್ಮಕ್ಕೆ ಸೇರಿದ ಅನೇಕ ಗುರುತುಗಳು ಸಿಕ್ಕಿವೆ. ಕಮಲ, ಢಮರು, ತ್ರಿಶೂಲ ಮುಂತಾದ ರಚನೆಗಳು ನೆಲಮಾಳಿಗೆಯ ಗೋಡೆಯ ಮೇಲೆ ಕಂಡುಬಂದಿದೆ.” ಎಂದು ಸಮಿತಿ ಸದಸ್ಯರಾಗಿರುವ ಅಜೇಯ್‌ ಮಿಶ್ರಾ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!