ಪ್ರಸವ ನಂತರದ ಖಿನ್ನತೆ ಎಂದರೇನು? ಇದರ ಲಕ್ಷಣಗಳೇನು?

ಮಾಜಿ ಸಿಎಂ ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆಗೆ ಪೋಸ್ಟ್‌ಪಾರ್ಟಮ್ ಡಿಪ್ರೆಶನ್ ಅಂದರೆ ಪ್ರಸವಾನಂತರದ ಖಿನ್ನತೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಪಿಪಿಡಿ ಎಂಬ ಸಮಸ್ಯೆ ಬಗೆಗಿನ ಚರ್ಚೆ ಮುನ್ನೆಲೆಗೆ ಬಂದಿದೆ. ಇದು ಗಂಭೀರವಾದ ಸಮಸ್ಯೆ ಎಂದು ಪರಿಗಣಿಸಲಾಗುತ್ತಿದೆ. ಆಗಷ್ಟೇ ಮಗುವಿಗೆ ಜನ್ಮ ನೀಡಿದ ಶೇ,22 ರಷ್ಟು ತಾಯಂದಿರ ಮೇಲೆ ಈ ಸಮಸ್ಯೆ ಪರಿಣಾಮ ಬೀರುತ್ತಿದೆ.

ಪ್ರಸವಾನಂತರದ ಖಿನ್ನತೆ ಎಂದರೇನು? ಇದರ ಲಕ್ಷಣಗಳೇನು?

ಹೆರಿಗೆಯ ನಂತರ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್‌ನಂಥ ಹಾರ್ಮೋನ್‌ಗಳ ಉತ್ಪಾದನೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ಪಿಡಿಡಿ ಉಂಟಾಗುತ್ತದೆ. ಪ್ರತಿ ತಾಯಿಗೂ ಹೆರಿಗೆ ನಂತರ ಮಾನಸಿಕ ಸಮಸ್ಯೆ ಇದ್ದದ್ದೆ. ಆದರೆ ಅದನ್ನು ಹಿಡಿತದಲ್ಲಿಯೂ ಇಡಬಹುದು. ಹೆರಿಗೆಯ ಎರಡು ವಾರದಲ್ಲಿ ಹಾರ್ಮೋನುಗಳ ಮಟ್ಟ ತೀವ್ರ ಕುಸಿತ ಕಾಣುತ್ತದೆ. ಹಾಗಾಗಿ ವರ್ತನೆಗಳಲ್ಲಿ ಬದಲಾವಣೆ ಕಾಣುತ್ತದೆ.

ಪಿಡಿಡಿ ಲಕ್ಷಣಗಳೇನು?

  • ಖಿನ್ನತೆ ಅಥವಾ ಅತಿಯಾದ ಮೂಡ್ ಸ್ವಿಂಗ್ಸ್
  • ಕಾರಣವಿಲ್ಲದೆ ಅಳು ಬರುವುದು
  • ಮಗುವಿನ ಜತೆ ಬಾಂಧವ್ಯದ ಕೊರತೆ
  • ಸ್ನೇಹಿತರು, ಕುಟುಂಬದವರಿಂದ ದೂರ
  • ಹಸಿವು ಆಗದಿರುವುದು ಅಥವಾ ಅತಿಯಾಗಿ ತಿನ್ನುವುದು
  • ನಿದ್ದೆ ಬಾರದಿರುವುದು ಅಥವಾ ಅತಿಯಾದ ನಿದ್ದೆ
  • ಯಾವಾಗಲೂ ಸುಸ್ತು
  • ಯಾವುದೇ ವಿಷಯದಲ್ಲೂ ಆಸಕ್ತಿ ಇಲ್ಲ
  • ಸಿಟ್ಟು ಎಲ್ಲದಕ್ಕೂ ಇರಿಟೇಷನ್
  • ಒಳ್ಳೆಯ ತಾಯಿ ಆಗಲಾರೆ ಎಂಬ ಭಾವನೆ
  • ಯಾವುದರಲ್ಲೂ ಭರವಸೆ ಇಲ್ಲ
  • ಕೆಲಸಕ್ಕೆ ಬಾರದವಳು ಎಂಬ ಭಾವನೆ
  • ಸರಿಯಾದ ಆಲೋಚನೆಗಳು ಇಲ್ಲ
  • ಪ್ಯಾನಿಕ್ ಅಟ್ಯಾಕ್
  • ಆತ್ಮಹತ್ಯೆ ಅಥವಾ ಮಗುವಿಗೆ ಹಾನಿ ಮಾಡುವ ಆಲೋಚನೆ

ಹೆರಿಗೆ ನಂತರವೂ ಆಗಾಗ ವೈದ್ಯರನ್ನು ಭೇಟಿ ಮಾಡಿ, ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಪ್ರೆಗ್ನೆನ್ಸಿಯಲ್ಲಿ ಆದಷ್ಟು ಖುಷಿಯಾಗಿರಿ. ಯಾವುದೇ ರೀತಿ ಲಕ್ಷಣಗಳು ಕಾಣಿಸಿದರೂ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!