CINEMA | ಸಮಂತಾ ಕನಸು ‘ಶಾಕುಂತಲಂ’ ಮೊದಲ ದಿನದ ಕಲೆಕ್ಷನ್ ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಮಂತಾ ಜೀವನದಲ್ಲಿ ಶಾಕುಂತಲಂ ಸಿನಿಮಾ ಸಾಕಷ್ಟು ಮಾನ್ಯತೆ ಪಡೆದಿದೆ.
ತೊಂದರೆಗಳ ಮೇಲೆ ತೊಂದರೆ ಅನುಭವಿಸುತ್ತಿರುವ ಸಮಂತಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದರು. ನಿನ್ನೆಯಷ್ಟೇ ಶಾಕುಂತಲಂ ರಿಲೀಸ್ ಆಗಿದ್ದು, ಮೊದಲ ದಿನ ಐದು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಅಂದುಕೊಂಡಷ್ಟು ಭರ್ಜರಿ ಓಪನಿಂಗ್ ಸಿಗದಿದ್ದರೂ, ವೀಕೆಂಡ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಪೌರಾಣಿಕ ಕಥೆ ಆಗಿರುವ ಕಾರಣ, ಈಗಾಗಲೇ ಕಥೆಯ ಸಾರ ತಿಳಿದಿರುವ ಕಾರಣ ಕೆಲ ವರ್ಗದ ಜನರಿಗೆ ಸಿನಿಮಾ ಮೇಲೆ ಆಸಕ್ತಿ ಇಲ್ಲ.

ಈ ಹಿಂದೆ ಸಮಂತಾ ನಟಿಸಿದ್ದ ಯಶೋದಾ ಕೂಡ ಮೊದಲ ದಿನ ಸಾಧಾರಣ ಗಳಿಕೆ ಮಾಡಿತ್ತು, ಆದರೆ ತದನಂತರ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿತ್ತು. ಶಾಕುಂತಲಂ ಕಥೆಯೂ ಹಾಗೇ ಆಗಬಹುದು ಎನ್ನುವ ನಿರೀಕ್ಷೆ ಎಲ್ಲರಿಗೂ ಇದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!