SLEEP PARALYSIS | ನಿದ್ದೆಯಲ್ಲೇ ಭಯ ತರಿಸುವ ಸ್ಲೀಪ್ ಪ್ಯಾರಾಲಿಸಿಸ್ ಎಂದರೇನು?

ಎಂದಾದರೂ ನಿಮಗೆ ಮಲಗಿದಾಗ ಯಾರೋ ನನ್ನ ಬಳಿ ಬರ್ತಿದ್ದಾರೆ, ನನ್ನ ಕುತ್ತಿಗೆ ಹಿಸುಕುತ್ತಿದ್ದಾರೆ, ನನ್ನ ಮೇಲೆ ಕುಳಿತಿದ್ದಾರೆ, ನನ್ನ ಕಣ್ಣೆದುರೇ ವ್ಯಕ್ತಿ, ಆಕೃತಿ, ಪ್ರಾಣಿ ಬಂದಂತೆ ಕಾಣಿಸಿದೆಯಾ? ಈ ರೀತಿ ಕಂಡಾಗ ನಿಮ್ಮ ಕಣ್ಣು ತೆರೆದಂತೆ ಅನಿಸುತ್ತದೆ. ಆ ವ್ಯಕ್ತಿ ನಿಮ್ಮ ಹತ್ತಿರವೇ ಇದ್ದಾರೆ ಆದರೆ ಹೆದರಿಕೆಗೆ ಕೂಗೋಣವೆಂದರೆ ಸ್ವರ ಬರೋದಿಲ್ಲ, ಕೂಗಿದಂತೆ ಅನಿಸುತ್ತದೆ ಅಷ್ಟೆ. ಇನ್ನು ಕೈ ಕಾಲು ಆಡಿಸಲೂ ಆಗುವುದಿಲ್ಲ. ಇದನ್ನೇ ಸ್ಲೀಪ್ ಪ್ಯಾರಾಲಿಸಿಸ್ ಎನ್ನುತ್ತಾರೆ.

ನಿಜ ಜೀವನಕ್ಕೂ ಸ್ಲೀಪ್ ಪ್ಯಾರಾಲಿಸಿಸ್‌ಗೂ ಕೂದಲೆಳೆ ಅಂತರವಷ್ಟೇ, ಈ ರೀತಿ ರಾತ್ರಿ ಹೆದರಿದ ಎಷ್ಟೋ ಮಂದಿ ಮರುದಿನ ಇದು ದೆವ್ವ ಭೂತದ ಕಾಟ ಎಂದು ತಿಳಿಯುವುದುಂಟು, ಇದು ಕನಸಲ್ಲ ನಿಜ ಎಂದು ವಾದ ಮಾಡುವುದೂ ಉಂಟು. ಸ್ಲೀಪ್ ಪ್ಯಾರಾಲಿಸಿಸ್ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ..

ಯಾರಿಗೆ ಹೆಚ್ಚು ಸ್ಲೀಪ್ ಪ್ಯಾರಾಲಿಸಿಸ್ ಸಮಸ್ಯೆ ಕಾಣುತ್ತದೆ?

ಸರಿಯಾಗಿ ನಿದ್ದೆ ಮಾಡದವರಿಗೆ
ಶಿಫ್ಟ್‌ಗಳಲ್ಲಿ ಕೆಲಸ ಮಾಡಿ, ನಿದ್ದೆಯ ರೊಟೀನ್ ಇಲ್ಲದವರಿಗೆ
ಮಾನಸಿಕ ಒತ್ತಡ ಹೆಚ್ಚು ಇರುವವರಿಗೆ
ಸೀದ ಮಲಗುವವರಿಗೆ
ಕೆಲವು ಮೆಡಿಸಿನ್‌ಗಳನ್ನು ಬಳಸುವವರಿಗೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!