Sunday, October 1, 2023

Latest Posts

ಆಡಳಿತ ನಡೆಸುವವರಿಗೆ ಯಾವ ಜಿಲ್ಲೆಯಾದರೇನು?: ಸಚಿವ ಕೆ.ಎಸ್.ಈಶ್ವರಪ್ಪ

ಹೊಸದಿಗಂತ ವರದಿ,ಶಿವಮೊಗ್ಗ:

ದೇವರ ಪಲ್ಲಕ್ಕಿ ಹೊರುವವರಿಗೆ  ಎಡಕ್ಕಾದರೇನು, ಬಲಕ್ಕಾದರೇನು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾ ಉಸ್ತುವಾರಿ ಬದಲಾವಣೆ ಬಗ್ಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಆಡಳಿತ ನಡೆಸುವವರಿಗೆ ಯಾವ ಜಿಲ್ಲೆಯಾದರೇನು ? ಆಡಳಿತ ವ್ಯವಸ್ಥೆಯಲ್ಲಿ ಆ ಜಿಲ್ಲೆ ಬೇಕು, ಈ ಜಿಲ್ಲೆ ಬೇಕೆಂದು ಚರ್ಚೆಯಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇದು ಆಗಬಾರದು ಎಂದರು.
ನಾನು ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದೆ. ಈಗ ಚಿಕ್ಕಮಗಳೂರು ಉಸ್ತುವಾರಿ ವಹಿಸಲಾಗಿದೆ. ಇದಕ್ಕೆ ವಿಶೇಷತೆ ಕಲ್ಪಿಸುವ ಅಗತ್ಯವಿಲ್ಲ  ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!