spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರವಾಹ ಬಂದರೇನು? ದೋಣಿಯಲ್ಲೇ ಕೂರಿಸಿ ಪಾಠ ಹೇಳಿಕೊಡುವ ಶಿಕ್ಷಕರಿದ್ದಾರೆ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಹಾರದಲ್ಲಿ ಯಾವಾಗ ಬೇಕೆಂದರೆ ಆಗ ಮಳೆ, ಫ್ಲಾಶ್ ಫ್ಲಡ್‌ಗಳಿಂದ ಇಲ್ಲಿನ ಜನ ತತ್ತರಿಸಿಹೋಗಿದ್ದಾರೆ. ಮನೆಯಲ್ಲಿ ತುಂಬಿದ ನೀರು ತೆಗೆಯುವ ಗೋಳಾಟದಲ್ಲಿರುವ ಜನ ಮಕ್ಕಳು ಶಾಲೆಗೇಕೆ ಹೋಗಿಲ್ಲ ಎನ್ನುವ ಬಗ್ಗೆ ಆಲೋಚಿಸುತ್ತಾರಾ? ಇಲ್ಲಿ ಆರು ತಿಂಗಳಿಗೊಮ್ಮೆ ಪ್ರವಾಹ ಬಂದರೆ ಮಕ್ಕಳು ಓದೋದ್ಯಾವಾಗ? ಇದಕ್ಕೆಲ್ಲ ಉತ್ತರ ಕಂಡುಹಿಡಿದಿದ್ದರೆ ಮೂವರು ಯುವ ಶಿಕ್ಷಕರು.

ಕತಿಹಾರ್ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದು, ಇಂತಹ ವಿದ್ಯಾರ್ಥಿಗಳಿಗೆ ದೋಣಿಯ ಮೇಲೆ ಪಾಠ ಮಾಡಲಾಗುತ್ತಿದೆ. ಇದಕ್ಕೆ ‘ನಾವ್ ಕಿ ಪಾಠಶಾಲಾ’ ಎಂದು ಹೆಸರಿಡಲಾಗಿದೆ.
ಕತಿಹಾರ್‌ನ ಗಂಗಾ ಪ್ರತಿವರ್ಷವೂ ಪ್ರವಾಹಕ್ಕೆ ಸಿಲುಕುತ್ತದೆ. ಇದರಿಂದಾಗಿ ತಿಂಗಳುಗಳ ಕಾಲ ಪ್ರದೇಶ ಜಲಾವೃತಗೊಂಡಿರುತ್ತದೆ. ಇಂತಹ ಪರಿಸ್ಥಿತಿ ಮಧ್ಯೆ ಶಾಲೆಯ ಮಾತೆಲ್ಲಿ? ಪ್ರತಿ ವರ್ಷದ ಸಮಸ್ಯೆಯಿಂದ ಬೇಜಾರಾದ ಶಿಕ್ಷಕರು ಹೊಸ ಪ್ಲಾನ್ ಒಂದನ್ನು ಕಂಡುಕೊಂಡಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ದೋಣಿಯ ಮೇಲೆ ಪಾಠ ಆರಂಭಿಸಿದ್ದಾರೆ.

ಯಾರು ಈ ಶಿಕ್ಷಕರು?
 ಕುಂದನ್ ಕುಮಾರ್ ಸಾಹಾ, ಪಂಕಜ್ ಕುಮಾರ್ ಸಾಹಾ ಮತ್ತು ರವೀಂದ್ರ ಮಂಡಲ್ ಎನ್ನುವ ಯುವ ಶಿಕ್ಷಕರು ಸ್ಥಳೀಯ ಮೀನುಗಾರರ ಬೋಟುಗಳನ್ನು ಬಳಸಿ ಅದರಲ್ಲಿಯೇ ಪಾಠ ಹೇಳಿಕೊಡಲು ಶುರು ಮಾಡಿದ್ದಾರೆ.

ಮನೆಗೇ ಹೋಗ್ತಾರೆ
 ಈ ಶಿಕ್ಷಕರನ್ನು ಹುಡುಕಿಕೊಂಡು ಯಾವ ವಿದ್ಯಾರ್ಥಿಗಳು ಬರೋದಿಲ್ಲ. ಇವರೇ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಮನೆಮನೆಗೆ ಹೋಗುತ್ತಾರೆ. 20 ವಿದ್ಯಾರ್ಥಿಗಳನ್ನು ಒಂದು ದೋಣಿಯಲ್ಲಿ ಕೂರಿಸಿ ಪಾಠ ಮಾಡುತ್ತಾರೆ.

ನೀರು ಬಂದರೆ?
ದೋಣಿಗೆ ಹಗ್ಗ ಕಟ್ಟಿ ಆ ಹಗ್ಗವನ್ನು ಸಮೀಪದ ಮರಕ್ಕೆ ಕಟ್ಟಲಾಗುತ್ತದೆ. ಸಣ್ಣ ಪುಟ್ಟ ಅಲೆಗಳು ಮಾತ್ರ ದೋಣಿಗೆ ತಾಗುತ್ತವೆ.

ಫೀಸ್ ಇಲ್ಲ
ಈ ಪರಿಸ್ಥಿತಿಯಲ್ಲಿ ಫೀಸ್ ಕೇಳುವ ಅಥವಾ ತೆಗೆದುಕೊಳ್ಳಲು ಸಾಧ್ಯವೇ? ಮಕ್ಕಳ ಬಳಿ ಒಂದು ರೂಪಾಯಿ ಹಣ ಪಡೆಯದೆ ಅವರಿಗಾಗಿ ಬುಕ್ಸ್,ಪೆನ್ಸಿಲ್ ನೀಡುತ್ತಾರೆ.

ಪ್ರವಾಹ ಜೊತೆಗೆ ಕೊರೋನಾ
ಈ ಪ್ರದೇಶದಲ್ಲಿ ಪ್ರವಾಹದಷ್ಟೇ ಕೊರೋನಾ ಭೀತಿಯೂ ಇದೆ. ಈಗಾಗಲೇ ಈ ಭಾಗದ ಎಲ್ಲ ಶಾಲೆಗಳು ಬಂದಾಗಿವೆ. ಮಳೆಯಿಂದಾಗಿ ಇಂಟರ್‌ನೆಟ್ ಸೇವೆಯೂ ಇಲ್ಲ. ಲಾಕ್‌ಡೌನ್‌ನಿಂದಲೂ ಮಕ್ಕಳು ಮನೆಯ ಸುತ್ತಮುತ್ತ ಅಲೆಯುತ್ತಾ, ಮನೆಯವರು ಹೇಳಿದ ಕೆಲಸ ಮಾಡಿಕೊಂಡು ಇದ್ದಾರೆ.

ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲೇಬೇಕು, ಬೇರೆ ಯಾವ ಮಕ್ಕಳಿಗಿಂತಲೂ ಈ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಬಾರದು ಎನ್ನುವ ಶಿಕ್ಷಕರ ಹಂಬಲಕ್ಕೆ ಬೆಲೆಯಿದೆ. ಶಾಲೆ ಮುಚ್ಚಿದ ನಂತರ ರೀತಿ ಹೊಸ ಐಡಿಯಾ ಮಾಡಿ, ತಮ್ಮ ಹಣವನ್ನೇ ಖರ್ಚು ಮಾಡಿ, ಮಕ್ಕಳ ಮನಸಿನಲ್ಲಿ ಶಿಕ್ಷಣದ ಹಣತೆ ಹಚ್ಚುತ್ತಿರುವ ಈ ಶಿಕ್ಷಕರ ಶಿಕ್ಷಣ ಭಕ್ತಿ ಮೆಚ್ಚಲೇಬೇಕು!

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss