ಕೆಲವೊಮ್ಮೆ ನಿದ್ದೆ ಮಾಡುವಾಗ ಯಾರೋ ನಿಮ್ಮನ್ನು ಕರೆದಂತೆ ಆಗುತ್ತದೆ. ಬೇರೆ ಕೆಲಸ ಮಾಡುವಾಗ ನಿಮ್ಮನ್ನು ಕರೆದಂತಾಗಿ ಆ… ಎಂದು ರಿಪ್ಲೆ ಕೂಡ ಮಾಡುತ್ತೀರಾ. ಈ ರೀತಿ ನಿಮಗೆ ಆಗಿದೆಯಾ? ಈ ರೀತಿ ಬೇರೆಯವರ ಬಳಿ ಹೇಳ್ಕೊಂಡ್ರೆ ನಿಂಗೆಲ್ಲೋ ಹುಚ್ಚು ಎಂದುಬಿಡುತ್ತಾರೆ. ಇದರ ಹಿಂದಿನ ಸತ್ಯ ಏನು?
ನಿಮ್ಮ ಹೆಸರನ್ನು ಯಾರೂ ಕರೆಯದಿದ್ದಾಗಲೂ ಯಾರಾದರೂ ಕರೆದಂತೆ ಅನಿಸಿದರೆ ಹೆದರಬೇಡಿ. ನಿಮಗೆ ಯಾವ ಸಮಸ್ಯೆಯೂ ಇಲ್ಲ. ಇದು ಆರೋಗ್ಯಕರ ಮನಸ್ಸಿನ ಲಕ್ಷಣವಂತೆ. ಹೆಸರು ಆಗಾಗ ಕೇಳಿದರೆ ವೈದ್ಯರ ಬಳಿ ಹೋಗಬೇಕಾಗಿಲ್ಲ. ನೀವು ಕಾನ್ಶಿಯಸ್ ಎಂದರ್ಥ ಅಷ್ಟೆ.