ಅಮೆರಿಕದಲ್ಲಿ ಪದೆ ಪದೇ ಶೂಟೌಟ್ ಆಗೋಕೆ ಕಾರಣ ಏನು? 33 ಕೋಟಿ ಜನರ ಬಳಿ ಇದೆ 40 ಕೋಟಿ ಗನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದಲ್ಲಿ ಶೂಟೌಟ್ ಪ್ರಕರಣಗಳ ಪದೇ ಪದೆ ನಡೆಯುತ್ತಿದ್ದು, ಹೆಣಗಳ ರಾಶಿ ಕಾಣಸಿಗುತ್ತಿದೆ. ಕೆಲ ದಿನಗಳ ಹಿಂದೆ 15 ವರ್ಷದ ಬಾಲಕ ಮನಬಂದಂತೆ ಗುಂಡು ಹಾರಿಸಿ ಐದು ಮಂದಿಯ ಪ್ರಾಣ ತೆಗೆದಿದ್ದ.
ಇದೀಗ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ಮಾಂಟೆರಿ ಪಾರ್ಕ್‌ನ ಡ್ಯಾನ್ಸ್ ಸ್ಟುಡಿಯೋ ಬಳಿ ನಡೆದ ಗುಂಡಿನ ದಾಳಿಗೆ 11 ಮಂದಿ ಬಲಿಯಾಗಿದ್ದಾರೆ.ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ದಾಳಿಯಾಗಿದ್ದು, ಏಳು ಮಂದಿ ಪ್ರಾಣ ಬಿಟ್ಟಿದ್ದಾರೆ.

23 ದಿನಗಳಲ್ಲಿ 36ನೇ ಸಾಮೂಹಿಕ ಗುಂಡಿನ ದಾಳಿ ಇದಾಗಿದೆ. ಅಮೆರಿಕದಲ್ಲಿ ಒಟ್ಟು 33 ಕೋಟಿ ಜನಸಂಖ್ಯೆ ಇದ್ದು, ಅವರ ಬಳಿ ಇರುವ ಬಂದೂಕುಗಳ ಸಂಖ್ಯೆ 40 ಕೋಟಿ ರೂಪಾಯಿಗಳಾಗಿದೆ. ಅಂದರೆ ನೂರು ಜನರ ಬಳಿ ಶೇ.120.5 ಗನ್‌ಗಳು ಇವೆ. ಬಂದೂಕು ದಾಳಿಯಿಂದ ಕಳೆದ 50 ವರ್ಷಗಳಲ್ಲಿ 15 ಲಕ್ಷ ಅಮೆರಿಕನ್ನರು ಬಲಿಯಾಗಿದ್ದಾರೆ.230 ವರ್ಷಗಳ ಇತಿಹಾಸದಿಂದಲೂ ಇಲ್ಲಿ ಗನ್ ಹಿಡಿದುಕೊಳ್ಳುವುದು ಮಾಮೂಲು ಎನ್ನುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!