ಸಾಮಾನ್ಯವಾಗಿ ಹಣ್ಣುಗಳ ಮೇಲೆ ಸ್ಟಿಕ್ಕರ್ ಅಂಟಿಸಿರುತ್ತಾರೆ, ನೋಡಿದ್ದೀರಾ? ಈ ಸ್ಟಿಕ್ಕರ್ಗಳನ್ನು ಹೆಚ್ಚು ಸೇಬು, ಕಿತ್ತಳೆ, ಸ್ಟ್ರಾಬೆರಿಗಳ ಮೇಲೆ ನೋಡಿದ್ದೇವೆ. ಇದನ್ನು ಹಾಕುವುದು ಹಣ್ಣು ಯಾವ ದೇಶದಿಂದ ಬಂದಿದೆ ಹಾಗೂ ಇದರ ಪ್ರೊಡ್ಯೂಸರ್ ಯಾರು ಎಂದು ತಿಳಿಯಲು. ಇದರ ಜೊತೆಗೆ ಇನ್ನೊಂದು ಮಹತ್ವದ ಮಾಹಿತಿ ಕೂಡ ಇದೆ.
ಹಣ್ಣಿನ ಸ್ಟಿಕರ್ಮೇಲಿರುವ ನಂಬರ್ಗಳ ಅರ್ಥ ಏನು?
- ಹಣ್ಣಿನ ಸ್ಟಿಕರ್ ಮೇಲೆ ನಾಲ್ಕು ಅಂಕೆಗಳಿದ್ದು, ಮೊದಲ ಅಂಕೆ 4 ರಿಂದ ಆರಂಭವಾಗಿದ್ದರೆ ಈ ಹಣ್ಣಿಗೆ ಪೆಸ್ಟಿಸೈಡ್ಸ್ ಹೊಡೆಯಲಾಗಿದೆ ಎಂದರ್ಥ.
- ಸ್ಟಿಕರ್ ಮೇಲೆ ಐದು ಅಂಕಿಗಳಿದ್ದು, ಅದರಲ್ಲಿ ಮೊದಲನೆ ಅಂಕಿ 9 ರಿಂದ ಆರಂಭವಾಗಿದ್ದರೆ ಅದು ಆರ್ಗಾನಿಕ್ ಎಂದು ಅರ್ಥ.
- ಇನ್ನು ಐದು ಅಂಕಿಗಳಿದ್ದು, ಅದರಲ್ಲಿ ಮೊದಲ ನಂಬರ್ 5 ಆಗಿದ್ದರೆ ಇದು ಜೆನಿಟಿಕಲಿ ಮಾಡಿಫೈ ಆದ ಹಣ್ಣು ಎಂದರ್ಥ.