ಈ ಬಾರಿಯ ಬಜೆಟ್ ಗಾತ್ರ ಎಷ್ಟು? ಇಲ್ಲಿದೆ ಮಾಹಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2023-24ನೇ ಸಾಲಿನ ಕೇಂದ್ರ ಬಜೆಟ್ (Budget 2023)ನ ಒಟ್ಟು ವೆಚ್ಚ 45,03,097 ಕೋಟಿ ರೂ. ಆಗಿದೆ.

ಕಳೆದ ವರ್ಷ 41.9 ಲಕ್ಷ ಕೋಟಿ ರೂ. ವೆಚ್ಚದ ಬಜೆಟ್ ಮಂಡನೆಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 3 ಲಕ್ಷ ಕೋಟಿ ರೂ.ನಷ್ಟು ಹೆಚ್ಚಳವಾದಂತಾಗಿದೆ.

ಈ ಬಾರಿಯ ಬಜೆಟ್​ನಲ್ಲಿ ಸಾಲಗಳನ್ನು ಹೊರತುಪಡಿಸಿ ಒಟ್ಟು 27.2 ಲಕ್ಷ ಕೋಟಿ ಸ್ವೀಕೃತಿ, ನಿವ್ವಳ ತೆರಿಗೆ ಸ್ವೀಕೃತಿ 23.3 ಲಕ್ಷ ಕೋಟಿ ರೂ. ಅಂದಾಜಿಸಲಾಗಿದೆ. ದೇಶದ ಜಿಡಿಪಿಯ ಶೇ 5.9ರಷ್ಟು ವಿತ್ತೀಯ ಕೊರತೆ ಅಂದಾಜಿಸಲಾಗಿದೆ. ಮುಂದಿನ ಹಣಕಾಸು ವರ್ಷಕ್ಕೆ ಮಾರುಕಟ್ಟೆ ಸ್ವೀಕೃತಿ ಅಂದಾಜು 11.8 ಲಕ್ಷ ಕೋಟಿ ರೂ. ನಿರೀಕ್ಷಿಸಲಾಗಿದೆ.

ಇನ್ನು ಪ್ರಸಕ್ತ ಹಣಕಾಸು ವರ್ಷದ (2022-23) ಪರಿಷ್ಕೃತ ವೆಚ್ಚ, ಸ್ವೀಕೃತಿಯ ವಿವರವನ್ನೂ ಬಜೆಟ್​ನಲ್ಲಿ ಉಲ್ಲೇಖಿಸಲಾಗಿದೆ. ಸಾಲಗಳನ್ನು ಹೊರತುಪಡಿಸಿ ಒಟ್ಟು 24.3 ಲಕ್ಷ ಕೋಟಿ ಸ್ವೀಕೃತಿ, ನಿವ್ವಳ ತೆರಿಗೆ ಆದಾಯ 20.9 ಲಕ್ಷ ಕೋಟಿ ರೂ. ಆಗಿದೆ. ಒಟ್ಟು ವೆಚ್ಚ 41.9 ಲಕ್ಷ ಕೋಟಿ ರೂ, ಆಗಿದ್ದು, ವಿತ್ತೀಯ ಕೊರತೆ ಜಿಡಿಪಿಯ ಶೇ 6.4ರಷ್ಟು ಇದೆ ಎಂದು ಬಜೆಟ್​ನಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!