spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೆಳಗ್ಗೆ ಬಿಸಿ ನೀರಿನ ಬದಲು ಕುಡಿಯಿರಿ ಲಿಂಬು ಶರಬತ್… ಇದರಿಂದ ಏನೆಲ್ಲ ಲಾಭವಿದೆ ಗೊತ್ತಾ?

- Advertisement -Nitte

ಲಿಂಬು ಶರಬತ್ (ಪಾನಕ) ಹೆಚ್ಚಾಗಿ ನಾವು ಬೇಸಿಗೆಯ ದಿನಗಳಲ್ಲಿ ವಾರದಲ್ಲಿ ಮೂರು ದಿನವಾದರೂ ಕುಡಿಯುತ್ತೇವೆ.  ಆದರೆ ಮಳೆಗಾಲ, ಚಳಿಗಾಲದಲ್ಲಿ ಶರಬತ್ ಹತ್ತಿರಕ್ಕೂ ಹೋಗುವುದಿಲ್ಲ. ಲಿಂಬು ಶರಬತ್ ಕುಡಿದರೆ ದೇಹಕ್ಕೆ ಯಾವುದೇ ಹಾನಿಯಿಲ್ಲ. ಇದನ್ನು ಯಾವ ಕಾಲದಲ್ಲಿಯೂ ಕುಡಿಯಬಹುದು.  ಇನ್ಮುಂದೆ  ಬೆಳಗ್ಗೆ ಬಿಸಿ ನೀರಿನ ಬದಲು ಲಿಂಬು ಪಾನಕ ಕುಡಿಯಿರಿ ಇದರಿಂದ ಏನೆಲ್ಲ ಲಾಭವಿದೆ ಗೊತ್ತಾ?

ಹೇಗೆ ಮಾಡುವುದು ಲಿಂಬು ಶರಬತ್?

ಬೇಕಾಗುವ ಸಾಮಗ್ರಿ

ಲಿಂಬೆ ಹಣ್ಣು
ಸಕ್ಕರೆ
ನೀರು
ಏಲಕ್ಕಿ ಪುಡಿ

ಮಾಡುವ ವಿಧಾನ:

  • ಮೊದಲಿಗೆ ಒಂದು ಲಿಂಬೆಹಣ್ಣನ್ನು ಕಟ್ ಮಾಡಿಕೊಂಡು ಅದರ ರಸ ತೆಗೆದುಕೊಳ್ಳಿ. ಆ ರಸಕ್ಕೆ 2 ಕಪ್ ನೀರು, 5 ಚಮಚ ಸಕ್ಕರೆ ಹಾಕಿ.
  • ಏಲಕ್ಕಿ ಪುಡಿಯನ್ನು ಚಿಟಿಕೆ ಹಾಕಿ, ಸಕ್ಕರೆ ಕರಗುವವರೆಗೂ ಮಿಕ್ಸ್ ಮಾಡಿ.  ಹೀಗೆ ಮಾಡಿದರೆ ಲಿಂಬು ಶರಬತ್ ರೆಡಿ.

ಲಿಂಬು ಶರಬತ್ ಸೇವನೆಯಿಂದಾಗುವ ಪ್ರಯೋಜನ:

ಉರಿ ಮೂತ್ರ:
ಉರಿ ಮೂತ್ರ ಸಮಸ್ಯೆ ಪದೇ ಪದೇ ಕಾಡುವವರು ಹೆಚ್ಚೆಚ್ಚು ಲಿಂಬು ಶರಬತ್ ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಲಿಂಬುವಿನಲ್ಲಿ ಸೋಂಕು ನಿವಾರಕ ಗುಣವಿದೆ.

ಪಿತ್ತ:
ಪಿತ್ತ ಹೆಚ್ಚಿದಷ್ಟು, ವಾಂತಿ , ತಲೆ ನೋವು ಎಲ್ಲವೂ ಬರುತ್ತದೆ. ಲಿಂಬು ಶರಬತ್ ನ್ನು ಬೆಲ್ಲದೊಂದಿಗೆ ತಯಾರಿಸಿಕೊಂಡು ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೇವಿಸಿದರೆ ಪಿತ್ತ ನಿವಾರಣೆಯಾಗುತ್ತದೆ

ಉಷ್ಣಾಂಶ ನಿವಾರಣೆ:
ದೇಹದಲ್ಲಿ ಉಷ್ಣಾಂಶ ಹೆಚ್ಚಾದಷ್ಟು ಒಂದಿಲ್ಲೊಂದು ಸಮಸ್ಯೆ ಹೆಚ್ಚುತ್ತದೆ. ಲಿಂಬು ಶರಬತ್ ಕುಡಿದರೆ ದೇಹದಲ್ಲಿ ಉಷ್ಣಾಂಶ ನಿಯಂತ್ರಣದಲ್ಲಿ ಇರುತ್ತದೆ. ದೇಹವನ್ನು ತಂಪಾಗಿ ಇಡುತ್ತದೆ.

ಮೈಗ್ರೇನ್:
ಶರಬತ್ ಕುಡಿದರೆ ಮೈಗ್ರೇನ್ ಕಡಿಮೆ ಆಗುತ್ತದೆ. ಲಿಂಬು ಸೇವನೆ ದೇಹವನ್ನು ರಿಲಾಕ್ಸ್ ಮಾಡುತ್ತದೆ. ಇದರಿಂದಾಗಿ ಮೈಗ್ರೇನ್ ಸಮಸ್ಯೆ ಕಡಿಮೆ ಆಗುತ್ತದೆ.

ಬಿಪಿ ನಿಯಂತ್ರಣ:
ಶರಬತ್ ಕುಡಿದರೆ ಬಿಪಿ ನಿಯಂತ್ರಣದಲ್ಲಿ ಇರುತ್ತದೆ ಮತ್ತು ಶುಗರ್ ಕೂಡ ಇಳಿಯಂದಂತೆ ನೋಡಿಕೊಳ್ಳುತ್ತದೆ. ಬಿಪಿ ಸಮಸ್ಯೆ ಇರುವವರು ತಪ್ಪದೇ ಈ ಶರಬತ್ ಸೇವಿಸಬೇಕು.

ಬಾಯಾರಿಕೆ:
ಬಾಯಾರಿಕೆ ಆದಾಗ ತಕ್ಷಣ ಶರಬತ್ ಕುಡಿಯಬೇಕು. ಶರಬತ್ ಸೇವನೆ ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss