spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

30 ವರ್ಷ ದಾಟೋದ್ರೊಳಗೆ ಈ ಎಲ್ಲ ಕೆಲಸ ಮಾಡಲು ಮಹಿಳೆಯರು ಬಯಸುತ್ತಾರೆ: ಏನಿದೆ ಇವರ Bucket listನಲ್ಲಿ?

- Advertisement -Nitte

ಮೂವತ್ತು ವರ್ಷ ದಾಟಿದರೆ ಅದೇನೋ ಕಳೆದುಕೊಂಡ ಭಾವ ಕಾಡುತ್ತದೆ. 30 ವರ್ಷದೊಳಗೆ ಎರಡು ಮಕ್ಕಳಿರಲಿ ಎಂದು ಮನೆಯವರು ಹೇಳುತ್ತಾರೆ. ಆದರೆ 30 ವರ್ಷದ ಸಮಯಕ್ಕೆ ಮದುವೆ ಆಗುವ ಆಲೋಚನೆ ಕೂಡ ಮಹಿಳೆಯರಿಗೆ ಇರೋದಿಲ್ಲ. ತಾನು ಸಿಂಗಲ್ ಆಗಿದ್ದಾಗ, 30 ರೊಳಗೆ ಈ ಅಡ್ವೆಂಚರ್‌ಗಳನ್ನು ಮಾಡಬೇಕು ಎಂದು ಬಹಳ ಮಹಿಳೆಯರಿಗೆ ಆಸೆ. ಬನ್ನಿ ಅವರ ಬಕೆಟ್ ಲಿಸ್ಟ್‌ನಲ್ಲಿ ಏನೇನಿದೆ ನೋಡೋಣ…

  • ಒಂದು ಬಾರಿಯಾದರೂ ಸೋಲೋ ಟ್ರಾವೆಲ್ ಮಾಡಿ.
  • ಹೊಸತೊಂದನ್ನು ಟ್ರೈ ಮಾಡಿ, ಗಿಟಾರ್, ಕರ್ಸೀವ್ ರೈಟಿಂಗ್, ಪೊಟರಿ, ಪೇಂಟಿಂಗ್ ಹೀಗೆ..
  • ಆದಷ್ಟು ಚೆನ್ನಾಗಿ ಅಡುಗೆ ಕಲಿಯಿರಿ. ಯವುದಾದರೂ ಮೂರು ಅಡುಗೆಯಲ್ಲಿ ಪರ್ಫೆಕ್ಟ್ ಆಗಿ.
  • ಸಂಬಳ ಕೂಡಿಸಿ ದೊಡ್ಡದೇನಾದರೂ ಮಾಡಿ, ಮನೆಯವರಿಗೆ ಗಾಡಿ, ಮೊಬೈಲ್ ಅಥವಾ ಚಿನ್ನ ಖರೀದಿಸಿ ಕೊಡಿ.
  • ಒಂದು ಭಾಷೆ ಕಲಿಯುವ ಪ್ರಯತ್ನ ಮಾಡಿ. ಮೊದಲಿಗೆ ಕಷ್ಟವಾದರೂ ಆಮೇಲೆ ಇಷ್ಟವಾಗುತ್ತದೆ.
  • ನಿಮ್ಮ ಅಥವಾ ಇನ್ಯಾರದ್ದಾದರೂ ಬರ್ಥ್‌ಡೇ ಪಾರ್ಟಿ ಅರೇಂಜ್ ಮಾಡಿ. ಖುಷಿ ಹಂಚಿ.
  • ಸ್ನೇಹಿತರ ಜೊತೆ ವೀಕೆಂಡ್ ಕಳೆಯಿರಿ. ಪ್ರತೀ ವರ್ಷವೂ ನೋಡಿರದ ಹೊಸ ಜಾಗಕ್ಕೆ ತೆರಳಿ.
  • ಯಾವುದಾದರೂ ಕಾಡಿನಲ್ಲಿ ಕ್ಯಾಂಪಿಂಗ್ ಮಾಡಿ, ಅಡುಗೆ ಮಾಡಿ ಊಟ ಮಾಡಿ.
  • ಯೋಗ, ಧ್ಯಾನ ಶಿಬಿರಗಳಲ್ಲಿ ಆಗಾಗ ಭಾಗವಹಿಸಿ.
  • ಯಾವಾಗಲೂ ತಿನ್ನಬೇಕು ಆದರೆ ದುಡ್ಡು ಹೆಚ್ಚು ಅಂತ ಬಿಟ್ಟದ್ದನ್ನು ಮಾಡಿ. ಒಂದೇ ಬಾರಿ ಜೀವಿಸೋಕೆ ಸಾಧ್ಯ.
  • ವಾಲೆಂಟಿಯರ್ ಆಗಿ ಏನನ್ನೂ ಬಯಸದೆ ಕೆಲಸ ಮಾಡಿ.
  • ಆದಷ್ಟು ದುಡ್ಡನ್ನು ಸೇವ್ ಮಾಡಿ. ದುಡ್ಡಿದ್ದರೆ ಯಾವ ಸಮಯದಲ್ಲಾದರೂ ಸಹಾಯ ಆಗುತ್ತದೆ.
  • ಹುಡುಗರನ್ನು ಡೇಟ್ ಮಾಡಿದ ಅನುಭವವೂ ಇರಲಿ, ಬ್ರೇಕ್‌ಅಪ್ ಆದ ನೋವೂ ಇರಲಿ.
  • ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯವರಿಗೂ ಆರೋಗ್ಯಕರ ಆಹಾರದ ಬಗ್ಗೆ ತಿಳಿಸಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss