ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಸಿನಿಮಾವನ್ನು ಕನ್ನಡದಲ್ಲಿ ಪ್ರಸೆಂಟ್ ಮಾಡ್ತಿರೋದು ಎಲ್ರಿಗೂ ಗೊತ್ತು. ಈ ಹಿನ್ನೆಲೆ ಈಗಾಗಲೇ ಸಿನಿಮಾ ತಂಡ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದು, ಎಲ್ಲಡೆ ಸಿನಿಮಾದ ಪ್ರಚಾರದಲ್ಲಿ ತೊಡಗಿವೆ.
https://www.instagram.com/tv/Cf-uMsCgR6c/?igshid=YmMyMTA2M2Y=
ಗಾರ್ಗಿ ನಿರ್ದೇಶಕ ಗೌತಮ್ ಚಂದ್ರನ್ ರಕ್ಷಿತ್ ಶೆಟ್ಟಿ ಬೆಸ್ಟ್ ಫ್ರೆಂಡ್. ಹೀಗಾಗಿ ರಕ್ಷಿತ್ ಶೆಟ್ಟಿ ಸಿನಿಮಾದ ಪ್ರಮೋಷನ್ ನಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಒಂದು ವೇದಿಕೆಯಲ್ಲಿ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ, ಗೌತಮ್ ಚಂದ್ರನ್ ಕಾಣಿಸಿಕೊಂಡಿದ್ದಾರೆ.
ಇಲ್ಲಿ ರಕ್ಷಿತ್ ಶೆಟ್ಟಿ ಅವರ ಫೇಮಸ್ ಡೈಲಾಗ್ನ ಅವರಿಗೆ ತಿರುಗಿಸಿ ಹೇಳಿ ಬೆಚ್ಚಿ ಬೀಳಿಸಿದ್ದಾರೆ ಸಾಯಿ ಪಲ್ಲವಿ.’ಎಂಥದ್ದಾ ಬೋಳಿ ಮಕ್ಳಾ, ಶೂಟ್ ಮಾಡ್ಬೇಕಾ?’ ಅನ್ನೋ ರಕ್ಷಿತ್ ಶೆಟ್ಟಿ ಫೇಮಸ್ ಡೈಲಾಗ್ ಅನ್ನ ಅವ್ರಿಗೇ ತಿರುಗಿಸಿ ಹೇಳಿದ್ದಾರೆ.
ಯೂಟ್ಯೂಬ್ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ, ಗಾರ್ಗಿ ನಿರ್ದೇಶಕ ಗೌತಮ್ ಮೂರೂ ಜನ ಇದ್ರು. ಅಲ್ಲಿ ರಕ್ಷಿತ್ ಶೆಟ್ಟಿ ಆಕ್ಷನ್ ಅಂದ ಕೂಡಲೇ ಸಾಯಿ ಪಲ್ಲವಿ ಹೇಳಿದ ಈ ಡೈಲಾಗ್ ಕೇಳಿ ಒಮ್ಮೆ ಬೆಚ್ಚಿ ಆಮೇಲೆ ಬಿದ್ದೂ ಬಿದ್ದೂ ನಕ್ಕಿದ್ದಾರೆ.
ಈ ನಡುವೆ ಆಂಕರ್ ಅನುಶ್ರೀ, ‘ರಕ್ಷಿತ್ ಅವ್ರೇ ನೀವು ಈ ಸಿನಿಮಾವನ್ನು ಕನ್ನಡದಲ್ಲಿ ಪ್ರೆಸೆಂಟ್ ಮಾಡ್ತಿರೋದು ಗಾರ್ಗಿ ಕಥೆ ಕೇಳಿಯಾ ಅಥವಾ ಸಾಯಿ ಪಲ್ಲವಿ ಅವ್ರಿಗಾಗಿಯಾ?’ ಅಂತ ಕೇಳಿದಾಗ ರಕ್ಷಿತ್ ಮುಖ ಎಲ್ಲ ಕೆಂಪು ಮಾಡ್ಕೊಂಡು ನಾಚ್ಕೊಂಡಿದ್ದಾರೆ.