Wednesday, July 6, 2022

Latest Posts

ಇಲ್ಲಿ ತಪ್ಪಾಗಿರಬಹುದು, ಆದರೆ, ಭಾರತವನ್ನು ಖಂಡಿಸಲ್ಲ: ಮಾಲ್ಡಿವ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ಬಿಜೆಪಿಯ ಮಾಜಿ ನಾಯಕರ ವಿವಾದಿತ ಹೇಳಿಕೆಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆ ಮಾಡಲಾಗುತ್ತಿದ್ದು , ಆದರೆ ಇದರ ನಡುವೆ ಮುಸ್ಲಿ ಪ್ರಾಬಲ್ಯವಿರುವ ಭಾರತದ ಬುಡದಲ್ಲೇ ಇರುವ ಮಾಲ್ಡಿವ್ಸ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಲ್ಡಿವ್ಸ್ ಸರ್ಕಾರದ ಮೌನ ವಹಿಸಿದೆ.
ಇಸ್ಲಾಮಿಕ್ ರಾಷ್ಟ್ರವಾಗಿದ್ದರೂ ಮಾಲ್ಡಿವ್ಸ್, ಭಾರತ ಸರ್ಕಾರದ ವಿರುದ್ಧ ಒಂದು ಮಾತನ್ನೂ ಆಡಿಲ್ಲ.
ಜೂನ್ 6 ರಂದು, ಮಾಲ್ಡೀವ್ಸ್ ನ ವಿರೋಧ ಪಕ್ಷವು ಪ್ರವಾದಿ ಮೊಹಮ್ಮದ್ ಅವರ ಹೇಳಿಕೆಗಳ ಬಗ್ಗೆ ಸಂಸತ್ತಿನಲ್ಲಿ ತುರ್ತು ನಿರ್ಣಯವನ್ನು ಮಂಡಿಸಿತು.ಈ ನಿರ್ಣಯವನ್ನು ಮಂಡಿಸುವಾಗ, ವಿರೋಧ ಪಕ್ಷದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಸಂಸದ ಆಡಮ್ ಷರೀಫ್ ಒಮರ್, ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ ಅವರ ಹೇಳಿಕೆಯನ್ನು ಖಂಡಿಸಿದ್ದರು. ಇದರ ನಂತರ ಆಡಳಿತಾರೂಢ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದರಿಂದ ಅದೇ ದಿನದ ಸಂಜೆ ಸರ್ಕಾರವು ಆತುರದ ಹೇಳಿಕೆಯನ್ನು ನೀಡಿತು.
ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ನಮಗೂ ಕಳವಳವಿದೆ ಎಂದು ಭಾರತದ ಪರ ಸೋಲಿಹ್ ಸರ್ಕಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಹೇಳಿಕೆಯ ಕುರಿತಾಗಿ ಭಾರತದಲ್ಲಿ ಸರ್ಕಾರ ನಡೆಸುತ್ತಿರುವ ಕ್ರಮವನ್ನು ಸ್ವಾಗತಿಸಿದೆ. ಇಲ್ಲಿ ತಪ್ಪಾಗಿರಬಹುದು. ಆದರೆ, ಇದೊಂದೇ ಕಾರಣಕ್ಕೆ ಭಾರತ ಸರ್ಕಾರವನ್ನು ಖಂಡನೆ ಮಾಡೋದಿಲ್ಲ ಎಂದು ಆಡಳಿತಾರೂಢ ಎಂಡಿಪಿ ಹೇಳಿದೆ.
ಮಾಲ್ಡಿವ್ಸ್ ಸಂಪೂರ್ಣವಾಗಿ ಇಸ್ಲಾಮಿಕ್ ದೇಶ. ಇಬ್ರಾಹಿಂ ಮೊಹಮದ್ ಸೊಲಿಹ್ ಇದರ ಅಧ್ಯಕ್ಷ . ಪುಟ್ಟ ದೇಶವಾಗಿರುವ ಮಾಲ್ಡಿವ್ಸ್ ‘ಇಂಡಿಯಾ ಫರ್ಸ್ಟ್’ ಎನ್ನುವ ಧೋರಣೆ ಅಳವಡಿಸಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss