ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೀರಿಯಡ್ಸ್ ಸಮಯದಲ್ಲಿ ಸರಿಯಾಗಿ ನಿದ್ದೆ ಬರೋದಿಲ್ವ? ಚೆನ್ನಾಗಿ ನಿದ್ದೆ ಬರಲು ಈ ಭಂಗಿಗಳಲ್ಲಿ ನಿದ್ರಿಸಿ…

ಪೀರಿಯಡ್ಸ್ ಸಮಯದಲ್ಲಿ ಹೇಗೇ ಮಲಗಿದರೂ ನಿದ್ದೆ ಬರುವುದಿಲ್ಲ.  ಕಂಪರ್ಟ್ ಆಗುವಂತೆ ಮಲಗೋಣ ಎಂದರೆ ಎಲ್ಲಿ ಬಟ್ಟೆಗೆ ಬ್ಲಡ್ ತಾಗುತ್ತದೆಯೋ ಎಂಬ ಚಿಂತೆ. ಹೊಟ್ಟೆ ಅಡಿಗೆ ಮಾಡಿ ಮಲಗೋಣ ಎಂದರೆ ಹೊಟ್ಟೆ ನೋವು. ಕಾಲು ಚಾಚಿ ಮಲಗೋಣ ಎಂದರೆ ಕಾಲು ನೋವು. ಪೀರಿಯಡ್ಸ್ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡುವುದಕ್ಕೂ ಕಷ್ಟ. ಅದೇ ನೀವು ಈ ಭಂಗಿಯಲ್ಲಿ ನಿದ್ದೆ ಮಾಡಿದರೆ ಹೊಟ್ಟೆ ನೋವು ಕಡಿಮೆ ಆಗುತ್ತದೆ. ಆರಾಮವಾಗಿ ನಿದ್ದೆಯೂ ಮಾಡಬಹುದು.

  • ಗರ್ಭದಲ್ಲಿ ಮಗು ಯಾವ ಭಂಗಿಯಲ್ಲಿ ಮಲಗುತ್ತದೆಯೋ ಅದೇ ರೀತಿ ಮಲಗಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ಜೊತೆಗೆ ಹೊಟ್ಟೆ ನೋವು ಕೂಡ ಕಡಿಮೆ ಆಗುತ್ತದೆ.
  •  ಹಾಸಿಗೆಯ ಮೇಲೆ ಅಂಗಾತ ಮಲಗಿ ದಿಂಬುಗಳನ್ನು ನಿಮ್ಮ ಮೊಣಕಾಲಿನ ಅಡಿಯಲ್ಲಿ ಇಟ್ಟುಕೊಂಡು ಮಲಗಿರಿ.
  • ಯೋಗಾಸನದಲ್ಲಿ ಬಲಾಸನ ಅನ್ನೋ ಭಂಗಿ ನಿಮಗೆ ತಿಳಿದಿರಬಹುದು. ಇದು ಕೊಂಚ ವಿಚಿತ್ರ ಆದರೂ ಈ ರೀತಿ ಮಲಗುವುದರಿಂದ ಸಿಕ್ಕಾಪಟೆ ಆರಾಮ ಎನಿಸುತ್ತದೆ. ತಲೆನೋವು ಕೂಡ ನಿವಾರಣೆಯಾಗುತ್ತದೆ.
  • ನೀವು ಮಲಗುವ ಕೋಣೆಯನ್ನು ತಂಪಾಗಿಟ್ಟುಕೊಳ್ಳಿ ಪೀರಿಯಡ್ಸ್ ಸಮಯದಲ್ಲಿ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಮಲಗುವ ಕೋಣೆಯನ್ನು 60-68 ಡಿಗ್ರಿಗಳಲ್ಲಿ ಇರಿಸಿ.
  • ಹೊಟ್ಟೆ ಅಡಿ ಮಾಡಿ ಎಂದಿಗೂ ಪಿರಿಯಡ್ಸ್ ಸಮಯದಲ್ಲಿ ಮಲಗಬೇಡಿ. ಏಕೆಂದರೆ ಬ್ಲೀಡಿಂಗ್ ಹೆಚ್ಚುವ ಸಾಧ್ಯತ ಇರುತ್ತದೆ. ಹೊಟ್ಟೆ ಪೆಟ್ಟು ಬೀಳುತ್ತದೆ.
  • ತುಂಬಾ ಹೊಟ್ಟೆ ನೋವಿದ್ದು, ನಿದ್ದೆ ಬರುತ್ತಿಲ್ಲ ಎಂದರೆ ಹೊಟ್ಟೆಗೆ ಬಿಸಿ ನೀರಿನ ಶಾಕ ಕೊಟ್ಟುಕೊಳ್ಳಿ. ಹಾಯಾಗಿರುತ್ತದೆ. ನಿದ್ದೆ ಬರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss