ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಧಾರಾವಿ ಪುನರಾಭಿವೃದ್ಧಿ ಯೋಜನೆಯ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
”ರಾಹುಲ್ ಗಾಂಧಿ ಮುಂಬೈನಲ್ಲಿ ದೊಡ್ಡ ‘ತಿಜೋರಿ’ ತಂದಿದ್ದಾರೆ. ಮಹಾರಾಷ್ಟ್ರಕ್ಕೆ ಏನಾದ್ರೂ ಕೊಡಲು ತಂದಿದ್ದಾರೆ ಅಂದುಕೊಂಡಿದ್ದೆವು… ಆದರೆ ಮಹಾರಾಷ್ಟ್ರದ ‘ತಿಜೋರಿ’ ಲೂಟಿ ಮಾಡಲು ಬಂದಿದ್ದಾರೆ… ಧಾರಾವಿ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿಂಧೆ ಒಂದು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಅದೇನೆಂದರೆ ಧಾರಾವಿಯಲ್ಲಿ 2 ಲಕ್ಷ ಜನರಿಗೆ ಮನೆ ಸಿಗಲಿದೆ ಎಂದು ತಿಳಿಸಿದ್ದಾರೆ.
“ಎಲ್ಲರೂ ಧಾರಾವಿಗೆ ಆದ್ಯತೆ ನೀಡಬೇಕು. ಇದು ಏಷ್ಯಾದ ಅತಿದೊಡ್ಡ ಯೋಜನೆಯಾಗಿದೆ ಮತ್ತು ರಾಜಕೀಯ ಜನರನ್ನು ಬದಿಗಿಟ್ಟು ನಿಮಗೆ ಏನು ಲಾಭದಾಯಕವಾಗಿದೆ ಎಂಬುದನ್ನು ನೋಡುವಂತೆ ನಾನು ಧಾರಾವಿಯ ಜನರಿಗೆ ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.