spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಾರಾದರೂ ನಿಮ್ಮನ್ನು ಫಾಲೋ ಮಾಡುತ್ತಿದ್ದಾರೆ ಎನಿಸುತ್ತಿದೆಯಾ? ಮಹಿಳೆಯರೇ ಈ ಟಿಪ್ಸ್ ನಿಮ್ಮ ಜೊತೆಗಿರಲಿ…

- Advertisement -Nitte

ಮಹಿಳೆಯರ ಸುರಕ್ಷತೆ ಈಗಿನ ಕಾಲದಲ್ಲಿ ದೊಡ್ಡ ಸವಾಲಾಗಿದೆ. ದೊಡ್ಡ ಸಿಟಿಗಳಲ್ಲಷ್ಟೇ ಅಲ್ಲ, ಹಳ್ಳಿಗಳಲ್ಲಿಯೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ದರೋಡೆ,ಲೈಂಗಿಕ ಕಿರುಕುಳದಿಂದ ಮಹಿಳೆಯರು ಬಳಲುತ್ತಾರೆ. ಎಷ್ಟೋ ಮಂದಿ ಒಬ್ಬರೇ ಓಡಾಡುತ್ತಾರೆ. ಆ ಸಮಯದಲ್ಲಿ ಯಾರಾದರೂ ಫಾಲೋ ಮಾಡುತ್ತಿದ್ದಾರೆ ಎನಿಸಿದರೆ ಈ ರೀತಿ ಮಾಡಿ..

  • ಗಾಬರಿಯಾಗಿ ಓಡಬೇಡಿ. ಏನೂ ಆಗಿಲ್ಲ ಎನ್ನುವಂತೆ ಮೆಲ್ಲಗೆ ನಡೆಯಿರಿ. ಕಾಮ್ ಆಗಿರಿ. ಗಾಬರಿಗೆ ಇನ್ನಷ್ಟು ತಲೆ ಓಡುವುದಿಲ್ಲ.
  • ಕೈ ಸನ್ನೆಗಳು ತಿಳಿಯದಂತೆ ನಿಮ್ಮವರಿಗೆ ಮೊಬೈಲ್ ಮೂಲಕ ನೀವು ಸುರಕ್ಷಿತವಾಗಿಲ್ಲ ಎನ್ನುವ ಸಂದೇಶ ರವಾನಿಸಿ. ಮೊಬೈಲ್ ಸೈಲೆಂಟ್‌ನಲ್ಲಿರಲಿ.
  • ಗಮನ ಇರಲಿ, ಅವರು ಏನು ಮಾಡಬೇಕೆಂದಿದ್ದಾರೆ ನಿಮಗೆ ತಿಳಿದಿಲ್ಲ. ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿರಲಿ.
  • ನೀವು ಮನೆ ಅಥವಾ ಪಿಜಿ ತಲುಪುವ ದಾರಿಯಲ್ಲಿ ಹೋಗಬೇಡಿ. ರಸ್ತೆಯನ್ನು ಬದಲಾಯಿಸಿ ಬೇರೆ ರಸ್ತೆಯಲ್ಲಿ ಓಡಾಡಿ.
  • ಹೆಚ್ಚು ಜನರು ಕಾಣುವ ರಸ್ತೆಗೆ ತೆರಳಿ. ಜನ ಹೆಚ್ಚಿದ್ದರೆ ಸಮಸ್ಯೆ ಕಡಿಮೆ.
  • ಮೊಬೈಲ್‌ನಲ್ಲಿ ಸೇಫ್ಟಿ ಆಪ್‌ಗಳನ್ನು ಹಾಕಿಕೊಳ್ಳಿ.
  • ಯಾರೂ ಇಲ್ಲ ಎಂದರೆ ಸೀದ ಪೊಲೀಸರಿಗೆ ಕರೆ ಮಾಡಿ. ಅವರು ಸಹಾಯಕ್ಕೆ ಧಾವಿಸುತ್ತಾರೆ.
  • ಪೆಪ್ಪರ್ ಸ್ಪ್ರೇ ಅಥವಾ ಖಾರದಪುಡಿ ಜೊತೆಯಲ್ಲಿರಲಿ.
  • ಫಾಲೋ ಮಾಡುತ್ತಿದ್ದಾರೆ ಎಂದು ತಿಳಿದಾಗ ಮನೆಗೆ ಹೋಗಬೇಡಿ. ಅವರಿಗೆ ನಿಮ್ಮ ಮನೆ ಅಡ್ರೆಸ್ ತಿಳಿದರೆ ಮುಂದೆ ಸಮಸ್ಯೆಯಾಗುತ್ತದೆ.
  • ಫಾಲೋ ಮಾಡುವವರಿಗೆ ಅವರು ಫಾಲೋ ಮಾಡುವ ವಿಷಯ ನಿಮಗೆ ತಿಳಿದಿದೆ ಎಂದು ಗೊತ್ತು ಮಾಡಿ. ಗ್ಯಾಪ್ ಹೆಚ್ಚಿಗೆ ಬರುವಂತೆ ಬಿರುಸಿನ ಹೆಜ್ಜೆ ಹಾಕಿ.
  • ಹೆದರಿಕೆ ಆದರೂ ಅದನ್ನು ತೋರಿಸಬೇಡಿ. ಹೆದರಿದವರನ್ನು ಹೆದರಿಸುವುದು ಸುಲಭ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss