USEFUL INFO | ಚಲಿಸೋ ರೈಲಿನಿಂದ ಫೋನ್ ಬಿದ್ದುಹೋದ್ರೆ ಏನು ಮಾಡ್ಬೇಕು?

ರೈಲಿನಲ್ಲಿ ಎಷ್ಟೇ ರಶ್ ಇದ್ರೂ, ನಿಂತುಕೊಳ್ಳೋದಕ್ಕೆ ಜಾಗ ಇಲ್ಲದೆ ಹೋದ್ರೂ ಯಾವುದೋ ಗ್ಯಾಪ್‌ನಲ್ಲಿ ಫೋನ್ ನೋಡಲೇಬೇಕು. ಸೀಟ್ ಇಲ್ಲ ಎಂದು ಬಾಗಿಲ ಬಳಿ ನಿಂತು, ಕುಳಿತು ಹಾಡು ಕೇಳೋದು..
ಮಿಸ್ ಆಗಿ ಕೈ ಜಾರಿ ಫೋನ್ ಬಿದ್ದಾಗ ಮುಗೀತು ಇನ್ನು ಫೋನ್ ಕಥೆ ಎಂದು ಸುಮ್ಮನಾಗುತ್ತೀರಾ? ಬಿದ್ದ ಫೋನ್‌ನ್ನು ಮತ್ತೆ ಪಡೆಯೋದು ಸಾಧ್ಯ, ಇದು ನಿಜವಾಗ್ಲೂ ನಂಬೋ ಮಾತಾ? ಖಂಡಿತಾ ಹೌದು, ನಿಮ್ಮ ಫೋನ್‌ನ್ನು ನೀವು ವಾಪಸ್ ಪಡೆಯಬಹುದು. ಹೇಗೆ ನೋಡಿ..

ಏನು ಮಾಡಬಾರದು?

  • ಫೋನ್ ಬಿದ್ದು ಹೋಯ್ತು ಎಂದು ಪ್ಯಾನಿಕ್ ಆಗಬೇಡಿ.
  • ಚೈನ್ ಎಳೆಯೋದನ್ನೂ ಮಾಡ್ಬೇಡಿ, ಇದರಿಂದ ಬೇರೆಯವರಿಗೆ ತೊಂದರೆ
  • ಚಲಿಸುವ ರೈಲಿನಿಂದ ಹಾರುವುದು, ಇಳಿಯೋದಕ್ಕೆ ಪ್ರಯತ್ನಿಸೋದು ಅಪರಾಧ ನೆನಪಿರಲಿ.

    ಏನು ಮಾಡಬೇಕು?

  • ಯಾವ ಜಾಗದಲ್ಲಿ ಫೋನ್ ಬಿತ್ತು ಗಮನಿಸಿ, ಬರೀ ಮುಳ್ಳು ಬಯಲು ಪ್ರದೇಶ ಏನೂ ಗೊತ್ತಾಗ್ತಿಲ್ಲ ಎನ್ನಬಹುದು, ಫೋನ್‌ನಲ್ಲಿ ಲೊಕೇಶನ್ ನೋಡಿ.
  • ರೈಲ್ವೆ ಕಂಬದ ಮೇಲೆ ಬರೆದ ನಂಬರ್, ಸೈಡ್ ಟ್ರ್ಯಾಕ್ ನಂಬರ್ ಗಮನಿಸಿ.
  • ನಂತರ ಯಾರಾದರೂ ಸಹ ಪ್ರಯಾಣಿಕರ ಫೋನ್ ಪಡೆದು 183ಗೆ ಕರೆ ಮಾಡಿ. ನಿಮ್ಮ ಮೊಬೈಲ್ ಎಲ್ಲಿ ಬಿದ್ದಿದೆ ಎನ್ನುವ ಮಾಹಿತಿ ನೀಡಿ.
  • ಫೋನ್ ಮಾದರಿ, ಬ್ರ್ಯಾಂಡ್, ಸ್ಥಳ, ಫೋನ್ ನಂಬರ್, ಫೋನ್ ಬಿದ್ದ ಸ್ಥಳ, ಹತ್ತಿರದ ಸ್ಟೇಷನ್ ಬಗ್ಗೆ ಮಾಹಿತಿ ನೀಡಿ.
  • 1512ಗೆ ಸಹ ಕರೆ ಮಾಡಿ ಮಾಹಿತಿ ನೀಡಬಹುದು, ಯಾರಾದರೂ ನಿಮ್ಮ ಫೋನ್ ಕಿತ್ತುಕೊಂಡು ಹೋದರೂ ಹೆಲ್ಪ್ ಲೈನ್ ಸಹಾಯ ಪಡೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!