ಮಕ್ಕಳಿರುವ ಮನೆಯಲ್ಲಿ ಅಥವಾ ಟ್ರಿಪ್ ಹೋದಾಗ, ಅಡುಗೆ ಮನೆಯ ಕೆಲಸದ ವೇಳೆ ಫೋನ್ ನೀರಿನಲ್ಲಿ ಬಿದ್ರೆ ಏನು ಮಾಡ್ತೀರಿ? ಫಸ್ಟ್ ಪ್ಯಾನಿಕ್ ಆಗಿ ಕೂಗಾಡ್ತೀರಿ ಅಲ್ವಾ? ಟೆನ್ಶನ್‌ನಲ್ಲಿ ಏನೇನೋ ಮಾಡೋಕೆ ಹೋಗಿ ಫೋನ್ ಹಾಳು ಮಾಡ್ಕೋಬೇಡಿ..ಫೋನ್ ನೀರಿನಲ್ಲಿ ಬಿದ್ರೆ ಈ ತಪ್ಪುಗಳನ್ನು ಮಾಡಬೇಡಿ..
ನಿಮ್ಮ ಫೋನ್ ನೀರಿಗೆ ಬಿದ್ದರೆ, ತಕ್ಷಣ ಅದನ್ನು ಚಾರ್ಜ್ ಮಾಡಬೇಡಿ. ಅಲ್ಲದೇ ಒದ್ದೆಯಾದ ಫೋನ್ ಅನ್ನು ಡ್ರೈಯರ್ ನಿಂದ ಒಣಗಿಸಲು ಹೋಗ್ಬೇಡಿ. ಇದರಿಂದ ಮೊಬೈಲ್ ಒಳಗಿನ ಸಾಧನಗಳು ಡ್ಯಾಮೇಜ್ ಆಗಬಹುದು. ಆದ್ದರಿಂದ ಯಾವತ್ತೂ ಅಷ್ಟೇ ಮೊಬೈಲ್ ನೀರಿಗೆ ಬಿದ್ದ ತಕ್ಷಣ ಆನ್ ಮಾಡುವುದಾಗಲೀ, ಚಾರ್ಚ್ ಮಾಡುವುದಾಗಲಿ ಮಾಡಲು ಹೋಗ್ಬೇಡಿ.
ನಿಮ್ಮ ಫೋನ್ ನೀರಿಗೆ ಬಿದ್ದರೆ, ಮೊದಲು ಅದನ್ನು ಆಫ್ ಮಾಡಿ. ಒಂದು ವೇಳೆ ನಿಮ್ಮ ಮೊಬೈಲ್‌ನಲ್ಲಿ ಬ್ಯಾಟರಿ ಇದ್ರೆ ಅದನ್ನು ತೆಗೆಯಿರಿ.
ನಂತರ ಫೋನ್‌ನಿಂದ ಸಿಮ್ ಕಾರ್ಡ್ ಮತ್ತು ಮೈಕ್ರೋ ಎಸ್‌ಡಿ ಕಾರ್ಡ್ ತೆಗೆದುಹಾಕಿ. ಒಣ ಬಟ್ಟೆಯ ಸಹಾಯದಿಂದ ಫೋನ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಬಳಿಕ ನೀರಿನಲ್ಲಿ ಬಿದ್ದ ಫೋನ್ ಅನ್ನು ಹೇಗೆ ಸರಿಪಡಿಸುವುದು ಎಂದು ತಿಳಿಯಿರಿ.
ಫೋನ್‌ನ್ನು ನೀರಿನಿಂದ ತೆಗೆದು ಬಟ್ಟೆಯಲ್ಲಿ ಒರೆಸಿ ಸೀದ ಅಕ್ಕಿ ಡಬ್ಬಕ್ಕೆ ಹಾಕಿ ಮುಚ್ಚಿ ಇಡಬೇಡಿ. ಅಕ್ಕಿಯ ಧೂಳು ಫೋನ್ ಒಳಹೊಕ್ಕಿ ಇನ್ನೇನಾದರೂ ಸಮಸ್ಯೆ ಆದೀತು. ಫೋನ್ ಒರೆಸಿ ತಕ್ಷಣ ಅದನ್ನು ರಿಪೇರಿ ಮಾಡಿಸುವಲ್ಲಿ ಕೊಡೋದು ಬೆಸ್ಟ್