ಕಣ್ಣೆದುರೇ ಆಕ್ಸಿಡೆಂಟ್ ಆದಾಗ ಏನು ಮಾಡಬೇಕು? ಸಹಾಯ ಮಾಡೋದು ಹೇಗೆ.. ಇಲ್ಲಿದೆ ಮಾಹಿತಿ..

ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತವೆ, ರಸ್ತೆ ಅಪಘಾತವನ್ನು ನೋಡಿದ ತಕ್ಷಣ ಮೊಬೈಲ್ ಹಿಡಿದು ಫೋಟೊ, ವಿಡಿಯೋ ಮಾಡಿ ಸೆನ್ಸೇಷನ್ ಆಗುವ ಪ್ರಯತ್ನದ ಮಧ್ಯೆ ಮಾನವೀಯತೆ ಮರೆಯಬೇಡಿ. ರಸ್ತೆ ಅಪಘಾತ ನೋಡಿದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ..

  • ನೀವು ರಸ್ತೆಯಲ್ಲಿ ಹೋಗುವಾಗ ಕಾರ್ ಅಥವಾ ಇನ್ಯಾವುದೇ ವಾಹನ ಅಪಘಾತ ಆಗುತ್ತಿರುವುದನ್ನು ಕಂಡರೆ ಮೊದಲು ನಿಮ್ಮ ಸೇಫ್ಟಿ ಬಗ್ಗೆ ಆಲೋಚಿಸಿ, ಒಂದಕ್ಕೊಂದು ಡಿಕ್ಕಿ ಹೊಡೆದು ನಿಮ್ಮ ಬಳಿ ತೊಂದರೆ ಬರುವ ಸಾಧ್ಯತೆ ಇದೆಯಾ? ಅಪಘಾತ ಸಂಭವಿಸಿ ಕೆಲ ಕ್ಷಣಗಳ ನಂತರ ಕಾರ್ ಬ್ಲಾಸ್ಟ್ ಆಗುವ ಸಾಧ್ಯತೆ ಇದೆ, ನೀವು ಸೇಫ್ ಆಗಿರಿ.
  • ನಾನು ಸೇಫ್ ಆಗಿದ್ದೇನೆ ಎನಿಸಿದ್ದರೆ ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿ, ಸಾಧ್ಯವಾದರೆ ಪೊಲೀಸರಿಗೂ ಮಾಹಿತಿ ನೀಡಿ.
  • ತದನಂತರ ವಾಹನದ ಬಳಿ ಹೋಗಿ ಅಪಘಾತದಿಂದ ನೋವು ಅನುಭವಿಸುತ್ತಿರುವವರಿಗೆ ಸಹಾಯ ಮಾಡಿ, ನಿಮ್ಮ ಕೈಲಾದ ಯಾವುದೇ ಸಹಾಯ ಮಾಡಬಹುದು.
  • ಅಪಘಾತ ನೋಡಿ ಓಡಿಹೋಗಬೇಡಿ, ಪೊಲೀಸರು ಬರುವವರೆಗೂ ಕಾದು ನೀವು ಏನನ್ನು ನೋಡಿದ್ದೀರಿ ಎಂದು ಸ್ಟೇಟ್‌ಮೆಂಟ್ ನೀಡಿ.
  • ನಿಮ್ಮ ಸುತ್ತಮುತ್ತ, ನಿಮ್ಮ ಕಾರ್, ನಿಮ್ಮ ಕುಟುಂಬ ಹಾಗೂ ನಿಮ್ಮ ಜೀವದ ಬಗ್ಗೆ ಗಮನ ಇರಲಿ.
  • ಫೋಟೊ, ವಿಡಿಯೋ ಕೆಲವೊಂದು ಸಮಯದಲ್ಲಿ ಸಹಾಯಕ್ಕೆ ಬರುತ್ತದೆ, ಆದರೆ ನೋವಿನಲ್ಲಿ ಇರುವವರಿಗೆ ಸಹಾಯವನ್ನೇ ಮಾಡದೆ ಫೋಟೊ, ವಿಡಿಯೋ ಮಾಡುತ್ತಾ ಕೂರಬೇಡಿ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!