Wednesday, August 10, 2022

Latest Posts

ಯಾವ ಹೊಣೆಗಾರಿಕೆ ನೀಡಿದರೂ ಅಭಿಮಾನದೊಂದಿಗೆ ನಿರ್ವಹಿಸುವೆ: ಮೆಟ್ರೋಮ್ಯಾನ್ ಇ.ಶ್ರೀಧರನ್

ಹೊಸ ದಿಗಂತ ವರದಿ, ತಿರುವನಂತಪುರ:

ಬಿಜೆಪಿ ನೇತೃತ್ವವು ಯಾವ ಹೊಣೆಗಾರಿಕೆ ನೀಡಿದರೂ ತಾನು ಅಭಿಮಾನ ಪೂರ್ವಕ ಸ್ವೀಕರಿಸುವೆನೆಂದು ಮೆಟ್ರೋಮ್ಯಾನ್ ಇ.ಶ್ರೀಧರನ್ ಹೇಳಿದ್ದಾರೆ.
ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದ ವಿಜಯ ಯಾತ್ರೆಯ ತಿರುವನಂತಪುರ ಶಂಕುಮುಖಂನಲ್ಲಿ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭ ವೇದಿಕೆಯಲ್ಲಿ ಇ.ಶ್ರೀಧರನ್ ಈ ರೀತಿ ತಿಳಿಸಿದರು. ಕೇರಳದ ಅಭಿವೃದ್ಧಿಗೆ ಉತ್ತಮ ರೀತಿಯಲ್ಲಿ ಹೊಣೆಗಾರಿಕೆಯನ್ನು ನಿರ್ವಹಿಸಲಿಕ್ಕಿರುವ ದೇಹ ಬಲವು, ಆತ್ಮ ಬಲವು ತನಗಿದೆ ಎಂದು ಅವರು ನುಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಜಯ ಯಾತ್ರೆ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮುಖ್ಯ ಭಾಷಣ ಮಾಡಿ, ಮೆಟ್ರೋಮ್ಯಾನ್ ಇ.ಶ್ರೀಧರನ್ ಅವರನ್ನು ಸನ್ಮಾನಿಸಿದರು. ಕೇಂದ್ರ ಸಚಿವ ವಿ.ಮುರಳೀಧರನ್, ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್, ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss