ಸೆಲೆಬ್ರಿಟಿಗಳ ಬ್ಯಾಗ್ನಲ್ಲಿ ಏನು ಇರುತ್ತದೆ ಎನ್ನುವ ಕ್ಯೂರಿಯಾಸಿಟಿ ಎಲ್ಲರಿಗೂ ಇರುತ್ತದೆ. ಸೆಲೆಬ್ರಿಟಿಗಳು ಬ್ಯಾಗ್ ಇಲ್ಲದೆ ಓಡಾಡುವುದೇ ಇಲ್ಲ. ಅಂಥದ್ದೇನಿದೆ ಅದರಲ್ಲಿ? ತಿಳಿದುಕೊಳ್ಳುವ ಅವಕಾಶ ಇಲ್ಲಿದೆ..
ಸನ್ನಿ ಲಿಯೋನಿ ಅವರ ಕ್ಯೂಟ್ ಬ್ಯಾಗ್ನಲ್ಲಿ ಏನೇನಿದೆ? ಅವರ ಬ್ಯಾಗ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಸನ್ನಿ ಲಿಯೋನಿ ಅವರ ಬ್ಯಾಗ್ನಲ್ಲಿ ಮೊಬೈಲ್ ಇಟ್ಟೇ ಇಡುತ್ತಾರಂತೆ. ಅದಕ್ಕೊಂದು ಪ್ರೆಟಿಯಾದ ಪೋನ್ ಕವರ್ ಕೂಡ ಇದೆ ಎಂದು ಹೇಳಿದ್ದಾರೆ.
ಪರ್ಫ್ಯೂಮ್, ಗ್ಲಾಸಸ್, ಮನೆ ಬೀಗ, ಲಿಪ್ಸ್ಟಿಕ್, ಮೇಕಪ್, ಲೈನರ್, ಪರ್ಸ್ ಇದೆ ಎನ್ನುತ್ತಾರೆ.
ಯಾರ ಬ್ಯಾಗ್ಆದರೂ ಬಾರೋ ಮಾಡುವುದಾದರೆ ಸೋನಮ್ ಕಪೂರ್ ಅವರ ಟ್ರಾವೆಲ್ ಬ್ಯಾಗ್ನನ್ನು ನೋಡೋಕೆ ಇಷ್ಟಪಡ್ತೀನಿ ಎಂದು ಸನ್ನಿ ಹೇಳಿದ್ದಾರೆ.
ನಿಮ್ಮ ಪರ್ಸ್ನಲ್ಲಿ ಇಬ್ಬರು ಮನುಷ್ಯರನ್ನು ಕೂರಿಸಿಕೊಂಡು ಹೋಗುವಂತಿದ್ದರೆ ಯಾರನ್ನು ಕೂರಿಸಿಕೊಂಡು ಹೋಗುತ್ತಿದ್ದಿರಿ ಎಂದು ಕೇಳಿದಾಗ ಸನ್ನಿ ಕೊಟ್ಟ ಉತ್ತರ ತುಂಬಾನೇ ಮಜವಾಗಿದೆ.. ನನ್ನನ್ನು ಯಾವಾಗಲೂ ನಗಿಸಲು ಕಪಿಲ್ ಶರ್ಮಾರನ್ನು ಹಾಗೂ ಇರುವುದನ್ನು ಇದ್ದಂತೆ ಹೇಳಲು ಕಂಗನಾ ರಣಾವತ್ ಅವರನ್ನು ಕೂರಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಸನ್ನಿ ಲಿಯೋನಿ ಅವರ ಬ್ಯಾಗ್ನಲ್ಲಿ ಒಂದೇ ಒಂದು ಚಾಪ್ಸ್ಟಿಕ್ ಕೂಡ ಇದೆ. ಅವರು ಚೈನೀಸ್ ಆಹಾರದ ಫ್ಯಾನ್ ಅಲ್ಲ, ತಲೆನೋವು ಬಂದಾಗ ಕೈಯಲ್ಲಿರುವ ಪಾಯಿಂಟ್ಸ್ಗಳನ್ನು ಒತ್ತಲು ಸ್ಟಿಕ್ಸ್ ಇಟ್ಟುಕೊಂಡಿದ್ದಾರೆ. ಇದರಿಂದ ತಕ್ಷಣವೇ ತಲೆನೋವು ಕಡಿಮೆ ಆಗುತ್ತದಂತೆ.
ಸನ್ನಿ ಬ್ಯಾಗ್ನಲ್ಲಿ ಇನ್ನೊಂದು ಮುಖ್ಯವಾದ್ದು ಇದೆ.. ಅದೇನಂತೀರಾ ಗಣೇಶನ ಮೂರ್ತಿ! ಹೌದು ಅವರ ಸ್ಟೈಲಿಸ್ಟ್ನ ತಾಯಿ ಗಣೇಶನ ಮೂರ್ತಿ ನೀಡಿದ್ದನ್ನು ಸನ್ನಿ ಕಾಪಾಡಿಕೊಂಡು ಇಟ್ಟಿದ್ದಾರೆ. ಎಲ್ಲಿ ಹೋದರೂ ದೇವರು ನನ್ನ ಜೊತೆಗೆ ಇದ್ದಾನೆ ಎನ್ನುವ ಭಾವನೆ ಬರುತ್ತದಂತೆ.
ಪರ್ಸ್ನಲ್ಲಿರುವ ಫೋನ್, ಮಾತ್ರೆಗಳ ಡಬ್ಬಿ ಹಾಗೂ ಗಣೇಶ ದೇವರನ್ನು ಮಾತ್ರ ಬಿಟ್ಟಿರೋಕೆ ಆಗೋದೆ ಇಲ್ಲವಂತೆ. ಇಷ್ಟು ವಸ್ತುಗಳನ್ನು ಸನ್ನಿ ಎಲ್ಲಿ ಹೋದರೂ ಜೊತೆಗೆ ಕೊಂಡೊಯ್ಯುತ್ತಾರೆ.