ಹೇಗಿದೆ ಮುಂಗಾರು? ಎಲ್ಲೆಲ್ಲಿ ಮಳೆ? ಇಲ್ಲಿದೆ ರಾಜ್ಯದ ಹವಾಮಾನ ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂಗಾರು ಈ ಬಾರಿ ತನ್ನ ವಿಚಿತ್ರ ನಡೆ ಮತ್ತೆ ಮುಂದುವರಿಸಿದೆ. ಆಗಮನ‌ಪೂರ್ವ ಅಬ್ಬರಿಸಿ ಮತ್ತೆ ಮೌನಕ್ಕೆ ಜಾರಿದ್ದ ಮುಂಗಾರು, ಈಗ ಅಲ್ಪ ಮಟ್ಟಿಗೆ ಚುರುಕುಗೊಂಡಿದ್ದು, ನಾಳೆಯಿಂದ (ಜೂ.13) ಮತ್ತೆ ದಕ್ಷಿಣ ಕನ್ನಡ ಹಾಗೂ ಕೇರಳ ಕರಾವಳಿಯಲ್ಲಿ ದುರ್ಬಲಗೊಳ್ಳಲಿವೆ.
ಈ ನಡುವೆ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮತ್ತೆರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ.

ಹೇಗಿದೆ ವಾತಾವರಣ?
ಜೂ. 13ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯಂತೆ ಕಾಸರಗೋಡು, ಕರ್ನಾಟಕದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ತುಮಕೂರು, ಕೋಲಾರ ಜಿಲ್ಲೆಗಳ ಅಲ್ಲಲ್ಲಿ ಉತ್ತಮ ಮಳೆ, ಹಾವೇರಿ, ದಾವಣಗೆರೆ (ಹರಪನಹಳ್ಳಿ ಸುತ್ತಮುತ್ತ ಸ್ವಲ್ಪ ಅಧಿಕ), ಗದಗ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ರಾಯಚೂರು, ಯಾದಗಿರಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಕಂಡುಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!