ಹೊಸದಿಗಂತ ಆನ್ ಲೈನ್ ಡೆಸ್ಕ್:
ವಿಶ್ವದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್, ಫೇಸ್ ಬುಕ್ ಹಾಗೂ ಇನ್ಸ್ ಟಾಗ್ರಾಂ ತಾಣಗಳು ಕೆಲಕಾಲ ಸ್ಥಗಿತಗೊಂಡಿದ್ದು, ತಾಂತ್ರಿಕ ದೋಷ ಸರಿಪಡಿಸಿರುವುದಾಗಿ ವಾಟ್ಸ್ ಆಪ್ ತಿಳಿಸಿದೆ.
ಶುಕ್ರವಾರ ರಾತ್ರಿ ತಾಂತ್ರಿಕ ದೋಷದಿಂದ ಎಲ್ಲಾ ಸಾಮಾಜಿಕ ಜಾಲತಾಣಗಳು ಸ್ಥಗಿತಗೊಂಡಿತ್ತು, ಈ ಬಗ್ಗೆ ಬಳಕೆದಾರರು ಟ್ವೀಟ್ ಮೂಲಕ ದೂರು ದಾಖಲಿಸಿದ್ದರು.
ಕೆಲವರಿಗೆ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು ತೊಂದರೆಯಾಗಿದ್ದು, ಮತ್ತೆ ಕೆಲವರಿಗೆ ಇಮೇಜ್ ಅಥವಾ ವಿಡಿಯೋ ಡೌನ್ ಲೋಡ್ ಆಗಲು ಸಮಸ್ಯೆಯಾಗಿದೆ ಎಂದು #whatsappdown ಹ್ಯಾಶ್ ಟ್ಯಾಗ್ ಅಡಿ 20 ಸಾವಿರ ಬಳಕೆದಾರರು ಟ್ವೀಟ್ ಮೂಲಕ ದೂರು ನೀಡಿದ್ದರು.
ಸತತ ಪರಿಶೀಲನೆಯ ಬಳಿಕ ಟ್ವೀಟ್ ಮಾಡಿದ ವಾಟ್ಸ್ ಆಪ್, ತಾಳ್ಮೆಯಿಂದ ಇದ್ದಿದ್ದಕ್ಕೆ ಧನ್ಯವಾದಗಳು. ಆದರೆ 45 ನಿಮಿಷಗಳ ಬಳಿಕ ನಾವು ಮತ್ತೆ ಬಂದಿದ್ದೇವೆ ಎಂದು ತಿಳಿಸಿತ್ತು.