ಹಣಕಾಸಿನ ಸಹಾಯ ಕೋರಿದ ಉಪರಾಷ್ಟ್ರಪತಿ..?

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಇದೇನಪ್ಪಾ..ಉಪರಾಷ್ಟ್ರಪತಿಯವರಾಗಿ ಆರ್ಥಿಕ ಸಹಾಯ ಕೇಳುತ್ತಿದ್ದಾರೆ ಅನ್ಕೊಂಡ್ರಾ..? ಸೈಬರ್‌ ಅಪರಾಧಿಗಳು ಉಪರಾಷ್ಟ್ರಪತಿಯವರನ್ನು ಕೂಡ ಬಿಟ್ಟಿಲ್ಲ. ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಮೂಲಕ ನಕಲಿ ಖಾತೆಗಳನ್ನು ಸೃಷ್ಟಿಸಿ, ಹಣ ಕೇಳುತ್ತಿದ್ದ ಸಾಮಾಜಿಕ ಜಾಲತಾಣದ ವಂಚಕರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಹೆಸರನ್ನು ಬಳಸಿಕೊಂಡು ವಂಚಿಸಲು ಯತ್ನಿಸಿದ್ದಾರೆ. ಅಂತಿಮವಾಗಿ ಇದು ಅವರ ಗಮನಕ್ಕೆ ಬಂದಿದ್ದು, ವೆಂಕಯ್ಯ ನಾಯ್ಡು ಅವರು ಗೃಹ ಇಲಾಖೆಗೆ ದೂರು ನೀಡಿದ್ದಾರೆ.

9439073183 ನಂಬರ್‌ ಹೊಂದಿರುವ ವ್ಯಕ್ತಿಯೊಬ್ಬ ತನ್ನನ್ನು ಉಪರಾಷ್ಟ್ರಪತಿ, ವೆಂಕಯ್ಯ ನಾಯ್ಡು ಎಂದು ಪರಿಚಯಿಸಿಕೊಂಡು
ಆರ್ಥಿಕ ಸಹಾಯಕ್ಕಾಗಿ ಹಲವರಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದಾರೆ.

ಈ ವಿಷಯ ತಿಳಿದ ಕೂಡಲೇ ವೆಂಕಯ್ಯನಾಯ್ಡು ಅವರು ತಮ್ಮ ಕಚೇರಿ ಮೂಲಕ ಕೇಂದ್ರ ಗೃಹ ಇಲಾಖೆಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗಿರುವುದರಿಂದ ಜನರು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!