WhatsApp ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ರಾಜೀನಾಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

WhatsApp’s ನ ಭಾರತದ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಸಾರ್ವಜನಿಕ ನೀತಿ ಮೆಟಾ ಇಂಡಿಯಾದ ನಿರ್ದೇಶಕ ರಾಜೀವ್ ಅಗರ್ವಾಲ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಮೆಟಾ ವಿಶ್ವದಾದ್ಯಂತ ಸುಮಾರು 11,000 ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರದಿಂದ ಅನೇಕ ಬದಲಾವಣೆಗಳು ಆಗುತ್ತಿದ್ದು, ಈ ತಿಂಗಳ ಆರಂಭದಲ್ಲಿ ಭಾರತದಲ್ಲಿ ಮೆಟಾ ಮುಖ್ಯಸ್ಥರಾಗಿದ್ದ ಅಜಿತ್ ಮೋಹನ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು.

ಇದೀಗ ಭಾರತದಲ್ಲಿ ವಾಟ್ಸಾಪ್ ಸಾರ್ವಜನಿಕ ನೀತಿಯ ನಿರ್ದೇಶಕ ಶಿವನಾಥ್ ತುಕ್ರಾಲ್ ಅವರನ್ನು ಭಾರತದ ಎಲ್ಲಾ ಮೆಟಾ ಬ್ರಾಂಡ್ ಗಳ ಸಾರ್ವಜನಿಕ ನೀತಿಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!