ಇನ್ಮೇಲೆ ವಾಟ್ಸಾಪ್‌ ನಲ್ಲಿ ಕಾಣಿಸಲಿದೆ ಮೆಸೇಜ್‌ ಎಡಿಟ್‌ ಆಪ್ಶನ್‌..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಸಾಮಾಜಿಕ ಮಾಧ್ಯಮ ವಾಟ್ಸಾಪ್‌ ನಲ್ಲಿ ಸಂದೇಶವನ್ನು ಎಡಿಟ್‌ ಮಾಡುವ ಆಯ್ಕೆ ಶೀಘ್ರದಲ್ಲೇ ಲಭ್ಯವಾಗಲಿದೆ.
ಪ್ರಸ್ತುತ ವಾಟ್ಸಾಪ್‌ ನಲ್ಲಿ ಒಮ್ಮೆ ಸಂದೇಶವನ್ನು ಕಳುಹಿಸಿದರೆ ಮತ್ತೊಮ್ಮೆ ಅದನ್ನು ಎಡಿಟ್‌ ಮಾಡುವ ಆಯ್ಕೆಗಳಿಲ್ಲ. ವಾಟ್ಸಾಪ್‌ನ ವಿನೂತನ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನ್ ಆಯ್ಕೆ ಸಿಗಲಿದೆ ಎಂಬ ಮಾಹಿತಿಗಳು ಹೊರಬಿದ್ದಿವೆ. ಇದರ ಪ್ರಕಾರ ಬಳಕೆದಾರರು ತಪ್ಪಾದ ಸಂದೇಶ ಹಂಚಿಕೊಂಡಾಗ, ಅದನ್ನು ಎಡಿಟ್ ಮಾಡಲು ಸಾಧ್ಯವಾಗಲಿದೆ.
ವಾಟ್ಸಾಪ್‌ ನಲ್ಲಿ ಎಡಿಟ್ ಬಟನ್ ವೈಶಿಷ್ಟ್ಯ ಜಾರಿಗೆ ತರುವ ಕುರಿತಾಗಿ ಸಂಸ್ಥೆಯು 5 ವರ್ಷಗಳ ಹಿಂದೆಯೇ ಸಿದ್ಧತೆಗಳನ್ನು ನಡೆಸಿತ್ತು. ಆದರೆ ಕಾರಣಾಂತರಗಳಿಂದ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಟ್ವಿಟ್ಟರ್ ಸಹ ಎಡಿಟ್ ಬಟನ್ ಆಪ್ಶನ್‌ ನೀಡುವ ಬಗ್ಗೆ ಪ್ರಸ್ತಾಪಿಸಿತ್ತು. ಆ ಬಳಿಕ ವಾಟ್ಸಾಪ್ ಸಹ ಈ ವೈಶಿಷ್ಯವನ್ನು ಅಳವಡಿಸಿಕೊಳ್ಳಲು ಯೋಜಿಸಿದೆ.
ಹಿಂದೆ ಬಳಕೆದಾರರು ಯಾರಿಗಾದರೂ ತಪ್ಪು ಸಂದೇಶ ಕಳುಹಿಸಿದಾಗ, ಮರಳಿ ಸರಿಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಆ ಸಂದೇಶವನ್ನು ಡಿಲೀಟ್‌ ಮಾಡಿ ಹೊಸದಾಗಿ ಸಂದೇಶವನ್ನು ಕಳುಹಿಸುವ ಆಯ್ಕೆ ಮಾತ್ರವೇ ಇತ್ತು. ಪ್ರಸ್ತುತ ಅಭಿವೃದ್ಧಿಪಡಿಸಲಾಗುತ್ತಿರುವ ಬೀಟಾ ಆವೃತ್ತಿಯಲ್ಲಿ, ನೀವು ಕಳುಹಿಸಿದ ಸಂದೇಶ ಡಿಲೀಟ್ ಮಾಡದೇ, ಅಲ್ಲಿಂದಲ್ಲಿಗೆ ಎಡಿಟಿಂಗ್ ಮಾಡಬಲ್ಲ ಆಯ್ಕೆಯನ್ನು ನೀಡಲಾಗುತ್ತದೆ. ಅಲ್ಲದೆ ಸಂದೇಶದಲ್ಲಿನ ತಪ್ಪುಗಳು ಹಾಗೂ ಕಾಗುಣಿತ ದೋಷಗಳನ್ನು ಸರಿಪಡಿಸಬಹುದು. ಆದರೆ ಸಂದೇಶವನ್ನು ಎಡಿಟ್ ಮಾಡಿದ ಬಳಿಕ ಹಿಂದೆ ಕಳುಹಿಸಿದ ಸಂದೇಶದ ಬಗ್ಗೆ ಯಾವುದೇ ಎಡಿಟ್ ಹಿಸ್ಟರಿ ಇತಿಹಾಸವನ್ನು ತೋರಿಸುವುದಿಲ್ಲ. ಸದ್ಯ ವಾಟ್ಸಪ್ ತಾನು  ಅಭಿವೃದ್ಧಿಪಡಿಸುತ್ತಿರುವ ಫೀಚರ್‌ನ ಸ್ಕ್ರೀನ್‌ಶಾಟ್ ಗಳನ್ನು ಹಂಚಿಕೊಂಡಿದ್ದು ಶೀಘ್ರದಲ್ಲಿಯೇ ಬಳಕೆದಾರರಿಗೆ ಲಭ್ಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!