‌ಇನ್ಮುಂದೆ ವಾಟ್ಸ್‌ ಆಪ್‌ ನಲ್ಲೇ ಫೋಟೋ ಬ್ಲರ್‌, ಚಾಟ್‌ ಎಡಿಟ್‌ ಮಾಡಬಹುದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಾಟ್ಸ್‌ ಆಪ್‌ ತನ್ನ ಹೊಸ ಫೀಚರ್‌ ಗಳ ಮೂಲಕ ಜನರ ಮನಗೆಲ್ಲುತ್ತಲೇ ಇರುತ್ತದೆ. ಬಳಕೆದಾರರಿಗೆ ಅಗತ್ಯವಾಗುವ ಎಲ್ಲಾ ರೀತಿಯ ಫೀಚರ್‌ ಗಳನ್ನೂ ಊಹೆಗೂ ಮೀರಿದಷ್ಟು ಉತ್ತಮ ರೀತಿಯಲ್ಲಿ ಗ್ರಾಹಕರ ಕೈಗಿಡುತ್ತದೆ.
ಇದೀಗ ವಾಟ್ಸ್‌ ಆಪ್‌ ಜನರಿಗೆ ತನ್ನ ಹೊಸ ಫೀಚರ್‌ ಮೂಲಕ ಮತ್ತೆ ಖುಷಿ ಹಂಚಿದೆ.. ಏನಿದೆ ಈ ಬಾರಿಯ ಹೊಸ ಫೀಚರ್?‌
ವಾಟ್ಸ್‌ ಆಪ್‌ ಮೂಲಕ ಕಳಿಸುವ ಫೋಟೋಗಳನ್ನು ಕೇವಲ ಕ್ರಾಪ್‌ ಮಾತ್ರವಲ್ಲದೆ ಇನ್ಮುಂದೆ ಬ್ಲರ್‌ ಕೂಡ ಮಾಡಬಹುದು.
ಯಾವುದಾದರೂ ಚಾಟ್‌ ಸ್ಕ್ರೀನ್‌ ಶಾಟ್‌ ಕಳುಹಿಸುವಾಗ ಮಧ್ಯದ ಚಾಟ್‌ ಗಳನ್ನೂ ಬ್ಲರ್‌ ಮಾಡಬಹುದು.
ವಾಟ್ಸ್‌ ಆಪ್‌ ಇಮೇಜ್‌ ಎಡಿಟ್‌ ಮಾಡುವಾಗ ಸಿಗುವ ಪೆನ್ಸಿಲ್‌ ಟೂಲ್‌ ನಂತೆ ಮತ್ತೆ 2 ಟೂಲ್‌ ಬರಲಿದೆ.. ಅದರ ಬಗ್ಗೆ ಹೆಚ್ಚಿನ ವಿಷಯ ಬಹಿರಂಗಗೊಂಡಿಲ್ಲ.
ಈ ಹಿಂದೆ ಹೇಳಿದಂತೆ ವಾಟ್ಸ್ ಆಪ್‌ ವಾಯ್ಸ್‌ ರೆಕಾರ್ಡಿಂಗ್‌ ಆಪ್‌ ನಿಂದ ಹೊರ ಬಂದರೂ ಕೇಳುವಂತ ಫೀಚರ್‌ ಕೂಡ ಇದರ ಜತೆಗೆ ಬಿಡುಗಡೆಯಾಗಲಿದೆ. ಸದ್ಯದಲ್ಲೇ ವಾಟ್ಸ್‌ ಆಪ್‌ ಈ ಹೊಸ ಫೀಚರ್ಸ್ ಗಳನ್ನು ರಿಲೀಸ್‌ ಮಾಡಲಿದ್ದು, ಅಪ್ಡೇಟ್ ಗಾಗಿ ಕಾಯಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!