spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಮತ್ತೆ ಹೊಸ ಫೀಚರ್ ಗಳನ್ನು ಹೊತ್ತು ತಂದ ವಾಟ್ಸ್ ಆಪ್! ಏನು ವಿಶೇಷತೆ ನೋಡಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪ್ರಸಿದ್ಧ ಸಾಮಾಜಿಕ ಜಾಲತಾಣ ವಾಟ್ಸ್ ಆಪ್ ದಿನಕ್ಕೊಂದು ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಿದೆ. ಹಾಗಿಯೇ ಇನ್ಮುಂದೆ ಒಂದೇ ವಾಟ್ಸ್ ಆಪ್ ಅನ್ನು ಹೆಚ್ಚು ಡಿವೈಸ್ ಗಳನ್ನು ಓಪನ್ ಮಾಡಲು ಆನ್‌ಲೈನ್‌ನಲ್ಲಿ ಇರಿಸಬೇಕಾಗಿಲ್ಲ ಎಂದು ವರದಿ ತಿಳಿಸಿದೆ.
ಮುಂದಿನ ಆವೃತ್ತಿಯ ವಾಟ್ಸ್‌ಆ್ಯಪ್‌ನ ಸೆಟ್ಟಿಂಗ್‌ ಗಳಲ್ಲಿ ಲಿಂಕ್ಡ್ ಡಿವೈಸ್ ನಲ್ಲಿ multi device ಅನ್ನುವ ಆಪ್ಷನ್ ನೀಡಲಾಗುವುದು ಎಂದು ವರದಿ ಮಾಡಿದೆ. ಈ ಹೊಸ ಮಲ್ಟಿ ಡಿವೈಸ್ ಸಪೋರ್ಟ್ ಬೇಕೆನ್ನುವಾಗ ನೀವು ನಿಮ್ಮ ಫೋನ್ ಅನ್ನು ಆನ್‌ಲೈನ್‌ನಲ್ಲಿ ಇರಿಸಬೇಕಾಗಿಲ್ಲ. ಐಒಎಸ್‌ನಲ್ಲಿ ಮಲ್ಟಿ-ಡಿವೈಸ್ ಬೀಟಾ ಪಡೆಯಲು ಆಪ್ ಸ್ಟೋರ್‌ನಿಂದ ಇತ್ತೀಚಿನ ಆವೃತ್ತಿಯ ವಾಟ್ಸ್ ಆಪ್ ಅಪ್‌ಡೇಟ್ ಮಾಡಿಕೊಳ್ಳಿ. ಬಳಿಕ ಲಿಂಕ್ಡ್ ಡಿವೈಸ್ ನಲ್ಲಿ ಮಲ್ಟಿ-ಡಿವೈಸ್ ಅನ್ನು ಆಯ್ಕೆ ಮಾಡಿ.
ಈಗ, ವಾಟ್ಸಾಪ್ ವೆಬ್‌ನಲ್ಲಿರುವಂತೆ ನಿಮ್ಮ ಫೋನ್‌ನೊಂದಿಗೆ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ. ಈಹೊಸ ಅಪ್ಲಿಕೇಶನ್‌ನಲ್ಲಿನ ಡೈರೆಕ್ಟರಿ ವೈಶಿಷ್ಟ್ಯವನ್ನು ಪರೀಕ್ಷಿಸಲು ಆರಂಭಿಸಿದೆ. ಪ್ರಸ್ತುತ, ಈ ವೈಶಿಷ್ಟ್ಯವು ಸಾವೊ ಪಾಲೊದಲ್ಲಿ ಪರೀಕ್ಷಾ ಹಂತದಲ್ಲಿದೆ ಮತ್ತು ಕಂಪನಿಯು ಶೀಘ್ರದಲ್ಲೇ ಭಾರತ ಮತ್ತು ಇಂಡೋನೇಷ್ಯಾದ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ವಿಸ್ತರಿಸಲಿದೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap