Friday, August 12, 2022

Latest Posts

“ನಮ್ಮ ಹೆಣ್ಣು ಮಕ್ಕಳು ಎಂದಿಗೂ ಸುರಕ್ಷಿತವಾಗಿರುತ್ತಾರಾ? ಯಾವಾಗಲೂ ಕಾಡುವ ಪ್ರಶ್ನೆ ಇದು”

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ತೆಲಂಗಾಣದ ಸೈದಾಬಾದ್​​ನಲ್ಲಿ ಆರು ವರ್ಷದ ಹುಡುಗಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಈ ಘಟನೆ ಕುರಿತು ತೆಲುಗು ಸೂಪರ್​ಸ್ಟಾರ್​ ಮಹೇಶ್​ ಬಾಬು ಕೂಡ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಸಿಂಗರೇಣಿ ಕಾಲೋನಿಯಲ್ಲಿ 6 ವರ್ಷದ ಮಗುವಿನ ಮೇಲೆ ನಡೆದ ಘೋರ ಅತ್ಯಾಚಾರವು ಮನುಷ್ಯ ಎಷ್ಟು ಕ್ರೂರಕ್ಕೆ ಇಳಿದಿದ್ದಾನೆ ಎಂಬುದನ್ನು ತಿಳಿಸುತ್ತಿದೆ. ನಮ್ಮ ಹೆಣ್ಣು ಮಕ್ಕಳು ಎಂದಿಗೂ ಸುರಕ್ಷಿತವಾಗಿರುತ್ತಾರೆಯೇ?”, ಇದು ನನ್ನನ್ನು ಯಾವಾಗಲೂ ಕಾಡುತ್ತಿರುವ ಪ್ರಶ್ನೆ” ಎಂದಿದ್ದಾರೆ.

ಆ ಸಂತ್ರಸ್ತ ಬಾಲಕಿಯ ಕುಟುಂಬದ ಪರಿಸ್ಥಿತಿ ಏನಾಗಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ! ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ, ಮಗುವಿಗೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ನಾನು ಅಧಿಕಾರಿಗಳನ್ನು  ಮತ್ತೊಂದು ಟ್ವೀಟ್ ನಲ್ಲಿ ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss