ಹೊಸ ದಿಗಂತ ವರದಿ, ಮೈಸೂರು:
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅಂಬಾ ವಿಲಾಸ ಅರಮನೆಯಲ್ಲಿ ಸಿದ್ಧತೆ ಕಾರ್ಯ ನಡೆಯುತ್ತಿದೆ. ಬಣ್ಣ ಬಳಿಯುವಾಗ (ಪೇಯಿಂಟ್) ಕಾರ್ಮಿಕನೊಬ್ಬ 20 ಅಡಿ ಎತ್ತರಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಮೈಸೂರಿನ ಗೌಸಿಯಾನಗರದ ನಿವಾಸಿ ಆಪ್ತಾಬ್ ಗಾಯಗೊಂಡ ಕಾರ್ಮಿಕ ಅರಮನೆಯ ಜಯಮಾರ್ತಾಂಡ ಗೇಟ್ನ ಗೋಪುರದಲ್ಲಿ
ಬಣ್ಣ ಬಳಿಯುತ್ತಿದ್ದಾಗ ಆಯಾ ತಪ್ಪಿ ಕಾರ್ಮಿಕ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.