Saturday, July 2, 2022

Latest Posts

ಡಬ್ಬಲ್ ಇಂಜಿನ್ ಸರ್ಕಾರ ಇದ್ದಾಗ, ಕೆಲಸವು ಡಬ್ಬಲ್ ವೇಗದಲ್ಲಿ ಆಗುತ್ತೆ: ಪ್ರಧಾನಿ ಮೋದಿ

ಹೊಸ ದಿಗಂತ ಡಜಿಟಲ್‌ ಡೆಸ್ಕ್:

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಉತ್ತರಪ್ರದೇಶದ ಗೋರಖ್​ಪುರಕ್ಕೆ ಭೇಟಿ ನೀಡಿದ್ದು, ಅಲ್ಲಿ 9,600 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಮಾತನಾಡಿದ್ದು, “ಗೋರಖ್‌ಪುರದಲ್ಲಿ ರಸಗೊಬ್ಬರ ಸ್ಥಾವರ ಮತ್ತು ಎಐಐಎಂಎಸ್‌ನ ಆರಂಭವು ಹಲವಾರು ಸಂದೇಶಗಳಿಗೆ ನಾಂದಿಯಾಗಿದೆ. ಡಬ್ಭಲ್ ಇಂಜಿನ್ ಸರ್ಕಾರ ಇದ್ದಾಗ, ಕೆಲಸವು ಡಬಲ್ ವೇಗದಲ್ಲಿ ನಡೆಯುತ್ತದೆ. ಪ್ರಾಮಾಣಿಕ ಉದ್ದೇಶದಿಂದ ಕೆಲಸ ಮಾಡಿದಾಗ ಯಾವ ವಿಪತ್ತು ಅಡ್ಡಿಯಾಗಲಾರದು” ಎಂದು ಹೇಳಿದರು.

“ತುಳಿತಕ್ಕೊಳಗಾದ ಮತ್ತು ವಂಚಿತ ವರ್ಗಗಳ ಬಗ್ಗೆ ಚಿಂತಿಸುವ ಸರ್ಕಾರವಿದ್ದಾಗ, ಈ ಬಗ್ಗೆ ಸರ್ಕಾರ  ಶ್ರಮಿಸುತ್ತದೆ ಮತ್ತು ಉತ್ತಮ ಫಲಿತಾಂಶವನ್ನು ನೀಡುತ್ತದೆ. ನವ ಭಾರತದ ನಿರ್ಮಾಣದತ್ತ ಹೆಜ್ಜೆ ಹಾಕುತ್ತಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇಂದು ಗೋರಖ್‌ಪುರದ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹೇಳಿದರು.

ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಡಬಲ್ ಇಂಜಿನ್ ಸರ್ಕಾರವು ಅಭಿವೃದ್ಧಿಯನ್ನು ಮುಂದುವರೆಸಿದೆ. ಬಿಕ್ಕಟ್ಟಿನ ಸಮಯದಲ್ಲಿಯೂ ಅದು ತನ್ನ ಕೆಲಸವನ್ನು ನಿಲ್ಲಿಸಲಿಲ್ಲ. ಕೆಲ ಜನರಿಗೆ ಇದು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಟಾಂಗ್‌ ನೀಡಿದರು.

“ʼಕೆಂಪು ಟೋಪಿಗಳು’ ಭಯೋತ್ಪಾದಕರ ಬಗ್ಗೆ ಮೃದುತ್ವವನ್ನು ತೋರಿಸಲು, ಅವರನ್ನು ಜೈಲಿನಿಂದ ಹೊರಗೆ ತರಲು ಸರ್ಕಾರವನ್ನು ರಚಿಸಲು ಬಯಸುತ್ತವೆ. ಹಾಗಾಗಿ ಯುಪಿಗೆ ‘ರೆಡ್ ಕ್ಯಾಪ್ಸ್’ ʼರೆಡ್ ಅಲರ್ಟ್ʼ ಎಂಬುದನ್ನು ಯಾವಾಗಲೂ ನೆನಪಿಡಿ – ಅವು ಅಪಾಯದ ಗಂಟೆಗಳು: ಎಂದು ಹೇಳಿದ್ದಾರೆ.

‘ಕೆಂಪು ಟೋಪಿಗಳು’ ಕೇವಲ ‘ಕೆಂಪು ದೀಪಗಳ’ ಬಗ್ಗೆ ಕಾಳಜಿ ವಹಿಸುತ್ತವೆ ಎಂದು ಇಂದು ಇಡೀ ಯುಪಿಗೆ ತಿಳಿದಿದೆ. ನಿಮ್ಮ ನೋವು ಮತ್ತು ಸಮಸ್ಯೆಗಳಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ‘ಕೆಂಪು ಕ್ಯಾಪ್’ಗಳಿಗೆ ಅಧಿಕಾರ ಏಕೆ ಬೇಕೆಂದರೆ  ಹಗರಣಗಳಿಗೆ ಮತ್ತು ತಮ್ಮ ಬೊಕ್ಕಸವನ್ನು ತುಂಬಲು, ಅಕ್ರಮ ಅತಿಕ್ರಮಣಗಳಿಗೆ, ಮಾಫಿಯಾಗಳಿಗೆ ಸ್ವಾತಂತ್ರ್ಯ ನೀಡಲು ಎಂದು ಹೇಳಿದರು.

ಇದೇ ವೇಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಕೂಡ ಮಾತನಾಡಿದ್ದು, ರಸಗೊಬ್ಬರ ಕಾರ್ಖಾನೆಯನ್ನು 1990 ರಲ್ಲಿ ಮುಚ್ಚಲಾಯಿತು ಮತ್ತು 2014 ರವರೆಗೂ ಅದನ್ನು ಪುನರಾರಂಭಿಸಲು ಯಾರೂ ಉಪಕ್ರಮವನ್ನು ತೆಗೆದುಕೊಳ್ಳಲಿಲ್ಲ. ಗೋರಖ್‌ಪುರವು 40 ವರ್ಷಗಳಿಂದ ವೈದ್ಯಕೀಯ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಾವಿರಾರು ಜನರು ಸತ್ತರು. ಆದರೆ ಇಂದು ಯುಪಿ 17 ಕೋಟಿ ಲಸಿಕೆಗಳ ಮೈಲಿಗಲ್ಲನ್ನು ತಲುಪಿದೆ ಎಂದು ತಮ್ಮ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿನ ಈ ಉದ್ಘಾಟನಾ ಕಾರ್ಯಕ್ರಮವು ಪೂರ್ವ ಯುಪಿಯಲ್ಲಿ ಪ್ರತಿಪಕ್ಷಗಳಿಗೆ ಅಸಾಧ್ಯವಾದ ಕನಸು ನನಸಾಗಿದೆ. ಕಳೆದ 30 ವರ್ಷಗಳಲ್ಲಿ ಯುಪಿಯಲ್ಲಿ 5 ಸರ್ಕಾರಗಳು ಬಂದು ಹೋದವು. ಗೋರಖ್‌ಪುರದಲ್ಲಿ ರಸಗೊಬ್ಬರ ಕಾರ್ಖಾನೆ ಆರಂಭಿಸಲು ಬಿಜೆಪಿ ಸರ್ಕಾರಕ್ಕೆ ಮಾತ್ರ ಧೈರ್ಯ ಎಂದು ಹೇಳಿದರು.

ಈ ಹಿಂದೆ ಗೋರಖ್‌ಪುರದಲ್ಲಿ ಎನ್ಸೆಫಾಲಿಟಿಸ್ ರೋಗಿಗಳ ಮಾದರಿಗಳನ್ನು ಪುಣೆಗೆ ಕಳುಹಿಸಲಾಗುತ್ತಿತ್ತು ಮತ್ತು ಅದು ದೃಢೀಕರಿಸುವ ವೇಳೆಗೆ ರೋಗಿಯು ಕೊನೆಯುಸಿರೆಯುತ್ತಿದ್ದರು ಇಲ್ಲವೇ ಪಾರ್ಶ್ವವಾಯುವಿಗೆ ಒಳಗಾಗಿಗುತ್ತಿದ್ದರು. ಇಂದು ಈ ಸಮಸ್ಯೆ ಇಲ್ಲ. ಕರೋನಾ, ಎನ್ಸೆಫಾಲಿಟಿಸ್ ಮತ್ತು ಇತರ ಕಾಯಿಲೆಗಳನ್ನು ಪರೀಕ್ಷಿಸಲು ನಾವು ಗೋರಖ್‌ಪುರದಲ್ಲಿ ಪ್ರಾದೇಶಿಕ ವೈರಲ್ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ್ದೇವೆ ಎಂದು ಹೇಳಿದರು. 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss