ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ವಿದೇಶಗಳಲ್ಲಿರುವ ಕಪ್ಪುಹಣ ಪತ್ತೆಗೆ ಕಾನೂನು ರೂಪುಗೊಂಡ ನಂತರ ಸಾವಿರಾರು ಕೋಟಿ ರುಪಾಯಿಗಳ ಕಾಳಧನ ಪತ್ತೆಯಾಗಿದ್ದು ಅವೆಲ್ಲ ನ್ಯಾಯ ಪ್ರಕ್ರಿಯೆಯಲ್ಲಿವೆ ಎಂದು ಸರ್ಕಾರ ಲೋಕಸಭೆಗೆ ನೀಡಿದ ಉತ್ತರವೊಂದರಲ್ಲಿ ತಿಳಿಸಿದೆ.
ಸುಮಾರು 166 ಪ್ರಕರಣಗಳಲ್ಲಿ ಈ ಕಾಯ್ದೆಯನ್ನು ಬಳಸಿ ಹಣ ವಸೂಲಿಗೆ ಪ್ರಯತ್ನಿಸಲಾಗುತ್ತಿದ್ದು, ಈ ಪೈಕಿ ಮುಖ್ಯ ಪ್ರಕರಣಗಳನ್ನು ವಿತ್ತ ಸಚಿವಾಲಯ ಹೆಸರಿಸಿದೆ.
ಎಚ್ ಎಸ್ ಬಿ ಸಿ ಪ್ರಕರಣದಲ್ಲಿ 8,465 ಕೋಟಿ ರೂ. ಲೆಕ್ಕಕ್ಕೆ ಸಿಗದ ಹಣ ಪತ್ತೆಯಾಗಿದ್ದು ಇದಕ್ಕೆ ದಂಡ ರೂಪದಲ್ಲಿ 1,294 ಕೋಟಿ ರೂ. ವಿಧಿಸಿ ಅದನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ.
ಐಸಿಐಜೆ (ಇಂಟರ್ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್) ಪ್ರಕರಣಗಳಲ್ಲಿ 11,010 ಕೋಟಿ ರೂ. ಲೆಕ್ಕ ತೋರಿಸದ ಆದಾಯ ಪತ್ತೆಯಾಗಿದ್ದು, ಹಾಗೆಯೇ ಪನಾಮ ಪೇಪರ್ಸ್ ಸೋರಿಕೆ ಪ್ರಕರಣಗಳಲ್ಲಿ 20,078 ಕೋಟಿ ರೂ. ಲೆಕ್ಕ ತೋರಿಸದ ಸಾಲಗಳು ಪತ್ತೆಯಾಗಿದೆ.
ಪ್ಯಾರಡೈಸ್ ಪೇಪರ್ಸ್ ಲೀಕ್ಸ್ ಪ್ರಕರಣಗಳಲ್ಲಿ ಅಂದಾಜಿನ ಪ್ರಕಾರ ಲೆಕ್ಕ ತೋರಿಸದ 246 ಕೋಟಿ ರೂ. ಸಾಲ ಪತ್ತೆಯಾಗಿದೆ.