spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗರ್ಭಿಣಿಯರು ಯಾವ ಭಂಗಿಯಲ್ಲಿ ಮಲಗಿದರೆ ಉತ್ತಮ, ಯಾವ ಭಂಗಿಯಲ್ಲಿ ಮಲಗಬಾರದು? ಇಲ್ಲಿದೆ ನೋಡಿ…

- Advertisement -Nitte

ಗರ್ಭಿಣಿಯರು ಪ್ರತಿಯೊಂದು ವಿಷಯದಲ್ಲಿಯೂ ಹೆಚ್ಚು ಗಮನ ಕೊಡಲೇ ಬೇಕು. ಸೇವಿಸುವ ಆಹಾರದಿಂದ ಹಿಡಿದು ಮಲಗುವ ಭಂಗಿಯವರೆಗೂ ಕಾಳಜಿ ವಹಿಸಬೇಕು. ಏಕೆಂದರೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ನೇರವಾಗಿ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಯಾವ ಭಂಗಿಯಲ್ಲಿ ಮಲಗಿದರೆ ಉತ್ತಮ, ಯಾವ ಭಂಗಿಯಲ್ಲಿ ಮಲಗಬಾರದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

ಹೊಟ್ಟೆ ಮೇಲೆ ಮಾಡಿ ಮಲಗಬಾರದು:
ಗರ್ಭಿಣಿಯರು ಅಪ್ಪಿ-ತಪ್ಪಿಯೂ ಹೊಟ್ಟೆ ಮೇಲೆ ಮಾಡಿ ಮಲಗಬಾರದು. ಹೊಟ್ಟೆ ಮೇಲೆ ಮಾಡಿ ಮಲಗಿದರೆ ಮಗುವಿಗೆ ಉಸಿರು ಕಟ್ಟುವ ಸಾಧ್ಯತೆ ಇರುತ್ತದೆ.

ಎಡ ಭಾಗಕ್ಕೆ ತಿರುಗಿ ಮಲಗಿದರೆ ಉತ್ತಮ:
ಈ ಭಂಗಿಯಲ್ಲಿ ಗರ್ಭಿಣಿಯರು ನಿದ್ದೆ ಮಾಡಿದರೆ ಮಗು ಕೂಡ ಆರಾಮವಾಗಿ ನಿದ್ದೆ ಮಾಡುತ್ತದೆ. ವೈದ್ಯರೂ ಕೂಡ ಗರ್ಭಿಣಿಯರಿಗೆ ಇದೇ ಭಂಗಿಯಲ್ಲಿಯೇ ನಿದ್ದೆ ಮಾಡಲು ಹೇಳುತ್ತಾರೆ. ರಕ್ತ ಸಂಚಾರ ಕೂಡ ಸರಾಗವಾಗಿ ಆಗುತ್ತದೆ.

ಹೊಟ್ಟೆ ಕೆಳಗೆ ಮಾಡಿ ಮಲಗುವಂತಿಲ್ಲ:
ಗರ್ಭಿಣಿಯರು ಹೊಟ್ಟೆ ಕೆಳಗೆ ಮಾಡಿ ಅಪ್ಪಿ-ತಪ್ಪಿಯೂ ಮಲಗಬೇಡಿ. ತುಂಬು ಗರ್ಭಿಣಿಯರಿಗೆ ಈ ಭಂಗಿಯಲ್ಲಿ ಮಲಗುವುದು ಅಸಾಧ್ಯ. ಅದೇ 3 ತಿಂಗಳವರೆಗೆ ಸಣ್ಣ ಗರ್ಭವಾಗಿರುವುದರಿಂದ ಹೊಟ್ಟೆ ಕೆಳಗೆ ಮಾಡಿ ಮಲಗಲು ಸಾಧ್ಯವಾಗುತ್ತದೆ. ಆದರೆ ಎಂದಿಗೂ ಗರ್ಭಿಣಿಯರು ಹೊಟ್ಟೆ ಕೆಳಗೆ ಮಾಡಿ ಮಲಗಬೇಡಿ. ಗರ್ಭಪಾತ ಆಗುವ ಸಾಧ್ಯತೆ ಇರುತ್ತದೆ.

ಬೆನ್ನಿನ ಮೇಲೆ ಭಾರ ಹಾಕಿ ಮಗಬೇಡಿ:
ತುಂಬಾ ಜನ ಬೆನ್ನಿನ ಮೇಲೆ ಭಾರ ಹಾಕಿ ಮಲಗುವುದು ಒಳ್ಳೆಯದೆನ್ನುತ್ತಾರೆ. ಆದರೆ ಬೆನ್ನು ಹಾಸಿಗೆ ತಾಗುವಂತೆ ಮಲಗಿದರೆ ಬೆನ್ನು, ಮೂಳೆ ಹಾಗೂ ಸೊಂಟದ ಮೇಲೆ ಹೆಚ್ಚಿನ ಒತ್ತಡ ಬೀಳುವುದು. ಹೀಗೆ ಮಲಗಿದರೆ ಕೆಲವರಿಗೆ ಉಸಿರಾಟಕ್ಕೂ ತೊಂದರೆ ಉಂಟಾಗುವುದು.

<p><strong>ಬೆನ್ನಿನ ಮೇಲೆ ಮಲಗುವುದು&nbsp;</strong><br /> ಒಂದು ತಿಂಗಳ ನಂತರ ಬೆನ್ನಿನ ಮೇಲೆ ಮಲಗಿದಾಗ, ಗರ್ಭಾಶಯವು &nbsp;ಹೃದಯಕ್ಕೆ ರಕ್ತವನ್ನು ಹಿಂದಿರುಗಿಸುವ ರಕ್ತನಾಳದ ಮೇಲೆ ಒತ್ತಡ&nbsp;ಹೇರುತ್ತದೆ. &nbsp;ಆದುದರಿಂದ ಬೆನ್ನಿನ ಮೇಲೆ ಮಲಗುವುದನ್ನು ಆದಷ್ಟು ಅವಾಯ್ಡ್ ಮಾಡಿ.&nbsp;</p>

ಬಲ ಭಾಗಕ್ಕೆ ತಿರುಗಿ ಮಲಗಬಹುದು:
ಗರ್ಭಿಣಿಯರು ನೇರವಾಗಿ ಮಲಗುವುದಕ್ಕಿಂತ ಬಲ ಬದಿಗೆ ತಿರುಗಿ ಮಲಗುವುದು ಉತ್ತಮ. ಆದರೆ ಬಲ ಬದಿಯಲ್ಲಿ ಮಲಗುವುದರಿಂದ ಯಕೃತ್ತಿನ ಮೇಲೆ ಒತ್ತಡ ಹೇರಬಹುದು, ಇದನ್ನು ತಪ್ಪಿಸಲು ಹೆಚ್ಚಿನ ವೈದ್ಯರು ಹೇಳುತ್ತಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss