ಸಿಹಿ ಹಂಚುವಾಗ ಯಡವಟ್ಟು: ಕೇರಳ ಸಚಿವೆ ಬಿಂದುಕೃಷ್ಣ ತಲೆಯ ಮೇಲೆ ಬಿತ್ತು ಬಿಸಿ ಬಿಸಿ ಪಾಯಸ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಿಯದರ್ಶಿನಿ’ ಉಚಿತ ಬಸ್ ಪ್ರಯಾಣ ಯೋಜನೆ ಉದ್ಘಾಟನಾ ಕಾರ್ಯಕ್ರಮದ ವೇಳೆ ಅನಿರೀಕ್ಷಿತ ಅವಘಡವೊಂದು ನಡೆದಿದೆ. ಕಾರ್ಯಕ್ರಮದ ಅಂಗವಾಗಿ ವಿತರಿಸಲಾಗುತ್ತಿದ್ದ ಬಿಸಿ ಪಾಯಸದ ಪಾತ್ರೆ ಆಕಸ್ಮಿಕವಾಗಿ ಸಚಿವೆ ಬಿಂದುಕೃಷ್ಣ ಅವರ ತಲೆಯ ಮೇಲೆ ಬಿದ್ದಿದೆ. ಕೊಲ್ಲಂ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಯೋಜನೆಗೆ ಸ್ವಾಗತ ಸೂಚಿಸುವ ಸಲುವಾಗಿ ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಪಾಯಸ ವಿತರಣೆ ಏರ್ಪಡಿಸಲಾಗಿತ್ತು. ಇದೇ ವೇಳೆ … Continue reading ಸಿಹಿ ಹಂಚುವಾಗ ಯಡವಟ್ಟು: ಕೇರಳ ಸಚಿವೆ ಬಿಂದುಕೃಷ್ಣ ತಲೆಯ ಮೇಲೆ ಬಿತ್ತು ಬಿಸಿ ಬಿಸಿ ಪಾಯಸ!